ಮಂಗಳೂರು: ಬಿಜೆಪಿ ರೈತ ಮೋರ್ಚಾ ಕೇಂದ್ರ ಸರಕಾರದ ನೂತನ ಕೃಷಿ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ ಕಾರ್ಯಾಗಾರ, ಸಮಾವೇಶವನ್ನು ಆಯೋಜಿಸಿ ಜನತೆಗೆ ಅರಿವು ಮೂಡಿಸುವ ಕಾರ್ಯ ಕೈಗೊಂಡಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ರೈತ ಮುಖಂಡರಿಗೆ ಕೇಂದ್ರದ ನೂತನ ಕೃಷಿ ಯೋಜನೆಯ ಬಗ್ಗೆ ಅರಿವು ಇದ್ದು, ಜನಸಾಮಾನ್ಯರಿಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ, ಸಮಾವೇಶಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮಂಡಲ ಸಮಿತಿಯ ಕ್ಷೇತ್ರಗಳಲ್ಲಿಯೂ ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಮಟ್ಟದ, ಮಂಡಲ ಸಮಿತಿ ಮಟ್ಟದ ಕಾರ್ಯಾಗಾರ ಮುಗಿದ ಬಳಿಕ ರೈತ ಸಮಾವೇಶ ನಡೆಯುತ್ತದೆ. ಅಲ್ಲಿ ಸಚಿವರಾದಿಯಾಗಿ ಎಲ್ಲ ಮುಖಂಡರು ಭಾಗವಹಿಸಲಿದ್ದು, ಜನಸಾಮಾನ್ಯರಿಗೆ ಕೃಷಿ ಕಾಯ್ದೆಯ ಅರಿವು ಮೂಡಿಸಲಾಗುತ್ತದೆ ಎಂದು ರಾಧಾಕೃಷ್ಣ ಬೊಳ್ಳೂರು ತಿಳಿಸಿದರು.
Kshetra Samachara
05/02/2021 05:43 pm