ಮಂಗಳೂರು: ಶಸ್ತ್ರದಲ್ಲಿ ಮಾಡಲಾಗದ ಕಾರ್ಯವನ್ನು ಸಾಹಿತಿಯೋರ್ವನು ತನ್ನ ಲೇಖನಿ ಎಂಬ ಅಸ್ತ್ರದ ಮೂಲಕ ಸಾಧಿಸುತ್ತಾನೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಅನಂತ ಪ್ರಕಾಶನದಿಂದ ಹೊರಬಂದ ಪ್ರಥಮ ಹೆಜ್ಜೆ ಹಾಗೂ ಚಂದನ ಕುಸುಮ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾಗಲು ಓದುಗರು ಹೆಚ್ಚಾಗಬೇಕಾದ ಅನಿವಾರ್ಯತೆ ಇದೆ. ಆಧುನಿಕ ಯುಗದಲ್ಲಿ ಅತೀವ ಮೊಬೈಲ್ ಬಳಕೆಯಿಂದ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಓದುಗರ ಸಂಖ್ಯೆ ಹೆಚ್ಚಾದಂತೆ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಾಹಿತ್ಯ ಕೃತಿಯೊಂದು ರಚನೆಯಾಗಬೇಕಾದಲ್ಲಿ ಕವಿಯು ತಾಯಿಯೋರ್ವಳು ತನ್ನ ಮಗುವಿನ ಬೆಳವಣಿಗೆಗೆ ತನ್ನ ಬದುಕನ್ನೇ ಸವೆಸುವಂತೆ ಮುಡಿಪಾಗಿಡುತ್ತಾನೆ ಎಂದು ಹೇಳಿದ ದಯಾನಂದ ಕತ್ತಲ್ ಸಾರ್ , ಸಾಹಿತಿ ಭೀಮರಾವ್ ಹಾಗೂ ಪುಸ್ತಕವನ್ನು ಪ್ರಕಾಶನ ಮಾಡಿರುವ ಅಮೃತ ಪ್ರಕಾಶನದ ಪ್ರಕಾಶಕಿ ಮಾಲತಿ ಶೆಟ್ಟಿ ಮಾಣೂರು ಅವರಿಗೆ ಅಭಿನಂದನೆ ಸಲ್ಲಿಸಿದರು.
Kshetra Samachara
02/02/2021 08:40 pm