ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೇಂದ್ರದ ಕಾನೂನಿನಿಂದ ಬೀಡಿ ಉದ್ಯಮಕ್ಕೆ ಸಂಕಷ್ಟ: ವಿನಯಕುಮಾರ್ ಸೊರಕೆ

ಕಾಪು: ಕೇಂದ್ರ ಸರಕಾರದ ಹೊಸ ಕಾನೂನಿನಿಂದಾಗಿ ಬೀಡಿ ಉದ್ಯಮ ಸ್ಥಗಿತ ಆಗುವ ಸಾಧ್ಯತೆ ಇದೆ. ಲಕ್ಷಾಂತರ ಜನರು ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಅವರ ಮನೆ ನಡೆಯುವುದೇ ಬೀಡಿ ಉದ್ಯಮದಿಂದ. ಬೀಡಿಯನ್ನು ಹೊರತುಪಡಿಸಿ ಆ ಕುಟುಂಬ ಬೇರೆ ಕೆಲಸ ಮಾಡಲು ಅಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಕಾಪುವಿನಲ್ಲಿ ಬೀಡಿ ಕಾರ್ಮಿಕರಿಗೆ ಆಗುವ ಅನ್ಯಾಯದ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ನಾವು ಮೆರವಣಿಗೆಯಲ್ಲಿ ಸಾಗಿ ಪ್ರತಿಭಟನಾ ಸಭೆ ನಡೆಸಿ, ಈ ಕರಾಳ ಕಾನೂನನ್ನು ಹಿಂದೆಗೆಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸುತ್ತೇವೆ.

ಆ ಮೂಲಕ ಮನವಿಯು ಜಿಲ್ಲಾಧಿಕಾರಿಯವರ ಮುಖಾಂತರ ರಾಜ್ಯಪಾಲರಿಗೆ ಹಾಗೂ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ.ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು.

ಈ ಸಂದರ್ಭ ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ. ಸಿಐಟಿಯುನ ಕವಿರಾಜ್, ಮಹಾಬಲ ವಡೇರ ಹೋಬಳಿ, ನವೀನ್ ಎನ್. ಶೆಟ್ಟಿ, ಶಿವಾಜಿ ಸುವರ್ಣ, ಪ್ರಭಾ ಶೆಟ್ಟಿ, ಅಖಿಲೇಶ್ ಕೋಟ್ಯಾನ್ , ಸೌರಭ್ ಬಳ್ಳಾಲ್, ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ, ಹರೀಶ್ ನಾಯಕ್, ಅಮೀರ್ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

02/02/2021 08:14 pm

Cinque Terre

8.11 K

Cinque Terre

1

ಸಂಬಂಧಿತ ಸುದ್ದಿ