ಮಂಗಳೂರು: ಮಂಗಳೂರು ನಗರ ಹೊರವಲಯದ ಪಜೀರ್ ನಲ್ಲಿ ಭಾರಿ(ಘನ) ವಾಹನ ಚಾಲನಾ ತರಬೇತಿ ಕೇಂದ್ರವನ್ನು ಡಿಸಿಎಂ ಲಕ್ಷ್ಮಣ ಸವದಿ ಇಂದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸವದಿಯವರು, ಜನರಿಗೆ ಉಪಯೋಗ ಆಗಲಿ ಎಂದು ಭಾರಿ ವಾಹನ ಚಾಲನಾ ತರಬೇತಿಯನ್ನು ಮಂಗಳೂರಲ್ಲಿ ಉದ್ಘಾಟಿಸಿದ್ದೇವೆ. ಅಪರಾಧ, ಅಪಘಾತ ಮಾಡದೆ ಚಾಲನೆ ಮಾಡಿದವರಿಗೆ ಮುಖ್ಯಮಂತ್ರಿಯವರಿಂದ ಚಿನ್ನದ ಪದಕ ಕೊಡಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ತಿಳಿಸಿದರು.
ಭಾರಿ ವಾಹನ ಚಾಲಕರಿಗೆ ದೊಡ್ಡ ಮಟ್ಟದ ತರಬೇತಿಯನ್ನು ಕಡ್ಡಾಯವಾಗಿ ಕೊಡಬೇಕಾಗಿದೆ. ಚಾಲಕರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಜಾಗ್ರತೆಯಿಂದ ಇರಬೇಕು. ನಮ್ಮ ಚಾಲಕರಿಗೆ ಸುರಕ್ಷತಾ ದೃಷ್ಟಿಯಿಂದ ತರಬೇತಿ ನೀಡಬೇಕಿದೆ ಎಂದರು.
ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಯು.ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
30/01/2021 09:51 pm