ಕುಂದಾಪುರ: ಸಚಿವ ಎಸ್. ಅಂಗಾರ ಇಂದು ಕುಂದಾಪುರ ತಾಲೂಕಿನ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
"ಕೋಟ ಶ್ರೀನಿವಾಸ ಪೂಜಾರಿ ಹಾಗೂ ನಾನು ಒಂದೇ ಸರ ಕಾರದವರು. ಅವರೂ ಸಚಿವರು ಈಗ ನಾನೂ ಸಚಿವ. ಅವರ ಉದ್ದೇಶ, ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಹೆಚ್ಚುವರಿಯಾಗಿ ನಾವೇನು ಅಭಿವೃದ್ಧಿ ಮಾಡಬೇಕು ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ" ಎಂದರು.
"ಮೀನುಗಾರರ ಸಾಲ ಮನ್ನಾದ ಬಗ್ಗೆಯೂ ಮುಖ್ಯಮಂತ್ರಿಯವರ ಗಮನಕ್ಕೆ ಮತ್ತೆ ತರಲಾಗುವುದು" ಎಂದು ಇದೇ ವೇಳೆ ಅವರು ಹೇಳಿದರು.
ಕಡಲ್ಕೊರೆತ ತಡೆಯಲು ಕ್ರಮ: ಕರಾವಳಿಯಾದ್ಯಂತ ಕಡಲ್ಕೊರೆತ ಭೀತಿ, ಸಮಸ್ಯೆ ನಿವಾರಿಸಲು ಸಂಬಂಧಪಟ್ಟ ಇಂಜಿನಿಯರ್ ಗಳೊಂದಿಗೆ ಚರ್ಚಿಸಲಾಗುವುದು. ಯಾವ ರೀತಿಯ ತಾಂತ್ರಿಕತೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಬಳಿಕ ಮುಂದಿನ ಕಾರ್ಯ ಮಾಡುತ್ತೇವೆ ಎಂದು ಸಚಿವ ಅಂಗಾರ ಹೇಳಿದರು.
ಬ್ರೋಕರ್ ಗಳ ಹಾವಳಿ ತಡೆಗೆ ಕ್ರಮ: ಯಾವುದೇ ಇಲಾಖೆಯಲ್ಲಿ ಬ್ರೋಕರ್ ಗಳ ಹಾವಳಿ ಇದ್ದರೆ ಅದನ್ನು ತಡೆಗಟ್ಟುವ ಕಾರ್ಯ ಮಾಡಲಾಗುವುದು. ನಾನೂ ಕೂಲಿ ಕಾರ್ಮಿಕ. ಕೂಲಿಯವರ ಕಷ್ಟ - ಸುಖ ನನಗೆ ಅರಿವಿದೆ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.
Kshetra Samachara
26/01/2021 08:27 pm