ಮುಲ್ಕಿ:ಮೂಲ್ಕಿ ನಗರ ಪಂಚಾಯತ್ ವತಿಯಿಂದ 72ನೇ ಗಣರಾಜ್ಯೋತ್ಸವ ಸಮಾರಂಭವು ಮಂಗಳವಾರ ಮೂಲ್ಕಿಯ ಕಾರ್ನಾಡಿನ ಗಾಂದಿ ಮ್ಯೆದಾನದಲ್ಲಿ ನಡೆಯಿತು. ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಶಾಸಕ ಉಮಾನಾಥ ಕೋಟಾನ್ ಧ್ವಜಾರೋಹಣಗೈದು ಮಾತನಾಡಿ ಮುಲ್ಕಿ ಹೋಬಳಿಯ ಮೂಲಭೂತ ಸೌಕರ್ಯಗಳ ಒದಗಿಸಲು ಸರಕಾರ ಬದ್ಧವಾಗಿದ್ದು ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪಕ್ಷಬೇಧ ಮರೆತು ಜನ ಹಿತ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದರು. ವೇದಿಕೆಯಲ್ಲಿ ಮುಲ್ಕಿಸರ್ಕಲ್ ಇನ್ಸ್ಪೆಕ್ಟರ್ ಕುಸುಮಾಧರ,ಮೂಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಸತೀಶ್ ಅಂಚನ್, ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ , ವಿಮಲ ಪೂಜಾರಿ, ಶೈಲೇಶ್, ರಾಧಿಕಾ ಕೋಟ್ಯಾನ್, ವಂದನ ಕಾಮತ್, ಹರ್ಷ ರಾಜ ಶೆಟ್ಟಿ, ದಯಾವತಿ ಅಂಚನ್, ಶಾಂತಾ ಕಿರೋಡಿಯನ್, ಬಾಲಚಂದ್ರ ಕಾಮತ್, ಲಕ್ಷ್ಮಿ, ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಡಾ. ಹರಿಶ್ಚಂದ್ರ ಸಾಲ್ಯಾನ್, ಡಾ. ನಾರಾಯಣ ಪೂಜಾರಿ, ಮುಲ್ಕಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೃಷ್ಣ, ಮುಲ್ಕಿ ಮೆಸ್ಕಾಂ ಅಧಿಕಾರಿ ವಿವೇಕಾನಂದ ಶೆಣೈ
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪೆರೇಡ್ ಕಮಾಂಡರ್ ಮುಲ್ಕಿ ಸಬ್ ಇನ್ಸ್ಪೆಕ್ಟರ್ ವಿನಾಯಕ ತೋರಗಲ್ ನೇತೃತ್ವದಲ್ಲಿ ಧ್ವಜವಂದನೆ ಸಲ್ಲಿಸುವ ಮೂಲಕ ಶಾಸಕರಿಗೆ ಗೌರವರಕ್ಷೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶೇ. 24.10 ಹಾಗೂ ಶೇ.7.5ನಿಧಿಯಡಿ ಮನೆ ರಿಪೇರಿ ಮತ್ತು ಶೌಚಾಲಯದ ನಿರ್ಮಾಣದ ಬಗ್ಗೆ ಮಂಜೂರಾತಿ ಪತ್ರ, ವಿದ್ಯಾರ್ಥಿ ವೇತನ ಚೆಕ್ ವಿತರಣೆ, ಶೇ.5ರ ನಿಧಿಯಡಿ ಅಂಗವಿಕಲ ಫಲಾನುಭವಿಗಳಿಗೆ ಪೋಷಣಾ ಭತ್ಯೆ ಸಹಾಯಧನದ ಚೆಕ್ ವಿತರಿಸಲಾಯಿತು. ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸ್ವಾಗತಿಸಿದರು. ಕಂದಾಯಾಧಿಕಾರಿ ಅಶೋಕ ಧನ್ಯವಾದ ಅರ್ಪಿಸಿದರು. ವಕೀಲ ಭಾಸ್ಕರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
Kshetra Samachara
26/01/2021 03:29 pm