ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸರಕಾರ ಸಾರಿಗೆ ನಿಗಮಗಳಿಗೆ ಬೆಂಬಲ ನೀಡುವ ಅಗತ್ಯವಿದೆ: ಹೆಚ್‌.ವಿ.ಅನಂತಸುಬ್ಬರಾವ್

ಮಂಗಳೂರು: ಸರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೆ ವ್ಯಾಪಾರದ ದೃಷ್ಟಿಕೋನದಿಂದ ನೋಡದೆ ನಾಗರಿಕರಿಗೆ ನೀಡುವ ಸೌಲಭ್ಯಗಳೆಂದು ಪರಿಗಣಿಸಲಿ. ಈ ಮೂಲಕ ಸಾರಿಗೆ ನಿಗಮಗಳಿಗೆ ಬೆಂಬಲ ನೀಡುವ ಅಗತ್ಯವಿದೆ ಎಂದು ಕೆಎಸ್ಆರ್ ಟಿಸಿ ಸಿಬ್ಬಂದಿ ಹಾಗೂ ನೌಕರರ ಫೆಡರೇಷನ್‌ ಅಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಮುಂದೆ ಕೆಲವೊಂದು ಬೇಡಿಕೆಗಳನ್ನು ಇರಿಸಿದ್ದು, ತಕ್ಷಣ ಅವುಗಳನ್ನು ನಡೆಸಿಕೊಡಬೇಕು. ಸರಕಾರ ಸಾರಿಗೆ ನಿಗಮಗಳ ಮೇಲೆ ಹೊರಿಸಿರುವ ಮೋಟಾರು ವಾಹನ ತೆರಿಗೆ ರದ್ದುಪಡಿಸಲಿ. ಸಾರಿಗೆ ನಿಗಮಗಳಿಗೆ ಹೆದ್ದಾರಿ ಸುಂಕ ವಿನಾಯಿತಿ ನೀಡಲಿ‌. ಇಂಧನದ ಮೇಲಿನ ಸುಂಕವನ್ನು 50 ಶೇ. ಕಡಿತಗೊಳಿಸಬೇಕು. ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗೆ ಸರಕಾರ ಬಾಕಿಯಿರಿಸಿರುವ ಮೊತ್ತವನ್ನು ತಕ್ಷಣ ನೀಡಬೇಕು ಹಾಗೂ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಕೆಎಸ್ಆರ್ ಟಿಸಿ ಮಂಗಳೂರು ವಿಭಾಗದ ಡಿಸಿ ಎಸ್.ಎನ್.ಅರುಣ್ ಕುಮಾರ್ ಅವರು ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂಬ ದೂರು ನನಗೂ ಬಂದಿದೆ. ಅಲ್ಲದೆ ಆತ ಕೆಟ್ಟದಾಗಿ,ಅವಾಚ್ಯವಾಗಿ ನಿಂದಿಸುತ್ತಾನೆಂಬ ಮಾಹಿತಿಯೂ ಇದೆ‌‌. ಈ ಬಗ್ಗೆ ನಾನು ಆತನ ಮೇಲೆ ವಿಚಾರಣೆ ನಡೆಸಬೇಕೆಂದು ಕೆಎಸ್ಆರ್ ಟಿಸಿ ಎಂಡಿಯವರಿಗೂ ತಿಳಿಸಿದ್ದೇನೆ‌. ಈ ಬಗ್ಗೆ ಅವರ ಮೇಲೆ ಚಾರ್ಜ್ ಶೀಟ್ ಹಾಕಲು ಸಚಿವರಿಗೂ ಒತ್ತಡ ಹಾಕುತ್ತೇನೆ ಎಂದು ಹೆಚ್‌.ವಿ.ಅನಂತಸುಬ್ಬರಾವ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

21/01/2021 01:56 pm

Cinque Terre

15.33 K

Cinque Terre

0

ಸಂಬಂಧಿತ ಸುದ್ದಿ