ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಆರ್ ಎಎಫ್ ಬೇಸ್ ಕ್ಯಾಂಪ್‌ ಶಿವಮೊಗ್ಗಕ್ಕೆ ಸ್ಥಳಾಂತರವಾಗುವಾಗ ದ.ಕ. ಸಂಸದರು, ಶಾಸಕರೇಕೆ ತುಟಿ ಬಿಚ್ಚಲಿಲ್ಲ"

ಮಂಗಳೂರು: ಕೇಂದ್ರ ಸರಕಾರ ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಆರ್ ಎಎಫ್ ಬೇಸ್ ಕ್ಯಾಂಪ್‌ ಶಿವಮೊಗ್ಗಕ್ಕೆ ಸ್ಥಳಾಂತರ ಆಗುವ ಸಂದರ್ಭ ದ.ಕ. ಜಿಲ್ಲೆಯ ಸಂಸದರು, ಶಾಸಕರು ಏಕೆ ತುಟಿ ಬಿಚ್ಚಲಿಲ್ಲ? ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿಗೆ ಬಂದಿರುವ ಈ ಉತ್ತಮ ಯೋಜನೆ ಶಿವಮೊಗ್ಗ ಪಾಲಾಗುವವರೆಗೆ ಸಂಸದರು, ಶಾಸಕರು ಮಲಗಿದ್ದರೇ? ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ರಾಗಿರುವ ಜಿಲ್ಲೆಯ ಸಂಸದರಿಗಿಂತ ಶಿವಮೊಗ್ಗ ಶಾಸಕರು ಪ್ರಭಾವಿಗಳೇ? ಎಂದು ಪ್ರಶ್ನಿಸಿದರು.

ಕೋಮು ಸೂಕ್ಷ್ಮ, ಉಗ್ರರ ಭೀತಿ, ಹಲವಾರು ವಾಣಿಜ್ಯ ಕಾರ್ಖಾನೆಗಳಿರುವ ಪ್ರದೇಶ ಮಂಗಳೂರಿಗೆ ಇಂತಹ ಆರ್ ಎಎಫ್ ಬೇಸ್ ಕ್ಯಾಂಪ್ ನ ಅತ್ಯಗತ್ಯವಿತ್ತು. ಆದರೆ, ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮಂಗಳೂರಿಗೆ ಅನ್ಯಾಯ ಮಾಡುತ್ತಿದ್ದು, ಈ ಯೋಜನೆ ಶಿವಮೊಗ್ಗ ಪಾಲಾಗುವವರೆಗೆ ಯಾಕೆ ಜಿಲ್ಲೆಯ ಸಂಸದರು, ಶಾಸಕರು‌ ಮೌನ ವಹಿಸಿದರು, ಯಾಕೆ ತಡೆಯಲಿಲ್ಲ? ಎಂಬುದಕ್ಕೆ ಸ್ಪಷ್ಟನೆ ನೀಡಲಿ ಎಂದು ಮಿಥುನ್ ರೈ ಆಗ್ರಹಿಸಿ ದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/01/2021 07:08 pm

Cinque Terre

15.08 K

Cinque Terre

0

ಸಂಬಂಧಿತ ಸುದ್ದಿ