ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಗೋ ಹತ್ಯೆ ನಿಷೇಧ ಕಾನೂನು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ"

ಮಂಗಳೂರು: ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದು ಸ್ವಾಗತಾರ್ಹ. ಗೋವು ಕೇವಲ ಪಶುವಲ್ಲ, ಇದರಲ್ಲಿ ದೇವಾನುದೇವತೆಗಳು ಐಕ್ಯವಾಗಿದ್ದಾರೆ. ಇಂತಹ ಗೋವಿನ ಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿ ರಾಜ್ಯ ಸರಕಾರ ಅತ್ಯುತ್ತಮ ಕಾರ್ಯ ಮಾಡಿದೆ ಎಂದು ಕದ್ರಿ ಜೋಗಿ ಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕದ್ರಿ ಜೋಗಿ ಮಠದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋ ಹತ್ಯೆ ಎಂದರೆ ಅದು ಮಾತೃ ಹತ್ಯೆಗೆ ಸಮಾನ. ಆದ್ದರಿಂದ ತಾಯಿಯನ್ನು ಹೊಡೆದು ಕೊಂದ ಪಾಪ ಗೋ ಹತ್ಯೆ ಮಾಡಿದವನಿಗೂ ತಟ್ಟುತ್ತದೆ ಎಂದರು.

ಗೋವುಗಳ ರಕ್ಷಣೆ ಮಾಡುವವನು ಶ್ರೇಷ್ಠನಾಗುತ್ತಾನೆ. ಅದೇ ರೀತಿ ಗೋ ರಕ್ಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಆದ್ದರಿಂದ ರಾಜ್ಯ ಸರಕಾರದ ನಡೆ ಸ್ವಾಗತಾರ್ಹ. ಈ ಕಾನೂನು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ನಿರ್ಮಲನಾಥಜೀ ಹೇಳಿದರು.

ನಾಥ ಸಂಪ್ರದಾಯಕ್ಕೆ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿರುವ ಕದ್ರಿ ಜೋಗಿ ಮಠದ ಶ್ರೀ ಕಾಲಭೈರವ ದೇವಸ್ಥಾನಕ್ಕೆ 200 ವರ್ಷಗಳ ಸುದೀರ್ಘ ಇತಿಹಾಸವಿದೆ. ಸದ್ಯ, ಶ್ರೀ ಕಾಲಭೈರವ ದೇವಸ್ಥಾನವನ್ನು ನವೀಕರಿಸಲು‌ ನಿರ್ಧರಿಸಲಾಗಿದ್ದು, ಸುಮಾರು 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ‌. ಈಗಾಗಲೇ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ದಾನಿಗಳ ನೆರವಿನಿಂದ ಈ ಕಾರ್ಯ ಸಂಪೂರ್ಣ ಗೊಳ್ಳಲಿದೆ‌. ಅದಕ್ಕಾಗಿ ಭಕ್ತಾದಿಗಳು ಈ ಕಾರ್ಯದಲ್ಲಿ ಕೈಜೋಡಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

15/01/2021 06:58 pm

Cinque Terre

10.48 K

Cinque Terre

2

ಸಂಬಂಧಿತ ಸುದ್ದಿ