ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಚಿವ ಸ್ಥಾನ ನೀಡದೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಯನ್ನು ಕಡೆಗಣಿಸಿದ ಸರ್ಕಾರ ಹಾಲಾಡಿ ಅಭಿಮಾನಿಗಳು ಫುಲ್ ಗರಂ

ಉಡುಪಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜ್ಯದಲ್ಲೇ ಎರಡನೇ ಲೀಡ್ ನಲ್ಲಿ ಗೆದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯು ಸಚಿವ ಸ್ಥಾನ ಸಿಕ್ಕಿಲ್ಲ. ಸದ್ಯ ಈ ವಿಚಾರವಾಗಿ ಹಾಲಾಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕುಂದಾಪುರದ ವಾಜಪೇಯಿ ಎಂದೇ ಜನರಿಂದ ಪ್ರೀತಿ ಗಳಿಸಿದ್ದ ಹಾಲಾಡಿ, ಐದು ಬಾರಿ ಕುಂದಾಪುರ ವಿಧಾನಸಭೆಯನ್ನು ಪ್ರತಿನಿಧಿಸಿ ಗೆಲುವು ಕಂಡಿದ್ದರು. ಹಾಲಾಡಿಯವರಿಗೆ ಸಚಿವ ಸ್ಥಾನ ಕೊಡಬೇಕೆಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬೆಂಬಲಿಗರು, ಸಾರ್ವಜನಿಕರು ಜಾಲತಾಣದಲ್ಲಿ ಆಂದೋಲನ ಮಾದರಿಯಲ್ಲಿ ಒತ್ತಡ ನಡೆಸಿದ್ದರು.

ಎಲ್ಲ ಮಾಧ್ಯಮಗಳಲ್ಲೂ ಹಾಲಾಡಿಯವರ ಹೆಸರು ಸಂಭಾವ್ಯರ ಸಾಲಿನಲ್ಲಿಯೇ ಇತ್ತು. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯ ವೇಳೆ ಹಾಲಾಡಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಅಭಿಮಾನಿ ಬಳಗಕ್ಕೆ ಇತ್ತು. ಆದರೆ ಈ ಬಾರಿಯು ಯಡಿಯೂರಪ್ಪ ಸರಕಾರ ನಿರಾಶೆ ಮೂಡಿಸಿದೆ. ಇದುವರೆಗೆ ಈ ಕುರಿತು ಶಾಸಕ ಹಾಲಾಡಿ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದರು, ಹಾಲಾಡಿ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/01/2021 03:39 pm

Cinque Terre

15.18 K

Cinque Terre

4

ಸಂಬಂಧಿತ ಸುದ್ದಿ