ಮಂಗಳೂರು: ನಗರದ ಹೊರವಲಯದ ಗುರುಪುರ ಸೇತುವೆ ಬಳಿ ದ್ವಿಚಕ್ರ ಸ್ಕಿಡ್ ಆಗಿ ಗಾಯಗೊಂಡ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾನವೀಯತೆ ಮೆರೆದಿದ್ದಾರೆ.
ನಳಿನ್ ಕುಮಾರ್ ಕಟೀಲು ಅವರು ಗುರುವಾರ ಸಂಜೆ ವೇಳೆ ಗುರುಪುರ ಮೂಲಕ ಕಂದಾವರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಅವರ ಕಾರು ಗುರುಪುರದ ನೂತನ ಸೇತುವೆ ಸಮೀಪಿಸುತ್ತಿದ್ದಂತೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ಯುವತಿಯೊಬ್ಬಳು ಗಾಯಗೊಂಡು ಬಿದ್ದಿದ್ದಾರೆ. ತಕ್ಷಣ ನಳಿನ್ ಕುಮಾರ್ ಕಟೀಲು ಅವರು ಕಾರಿ ನಿಲ್ಲಿಸಿ ಯುವತಿ ಇರುವಲ್ಲಿಗೆ ಧಾವಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಗಾಯಾಳು ಯುವತಿಯ ತಲೆ ಮತ್ತು ಹಣೆಗೆ ಏಟಾಗಿತ್ತು. ಕೂಡಲೇ ಆಟೋರಿಕ್ಷಾವೊಂದರಲ್ಲಿ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಳಿನ್ ಕುಮಾರ್ ಕಟೀಲು ಅವರು ಯುವತಿಗೆ ಸಕಾಲಕ್ಕೆ ಮಾಡಿದ ಮಾನವೀಯ ಕಾರ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Kshetra Samachara
14/01/2021 08:53 pm