ಮಂಗಳೂರು: ಕೊರೊನಾ ವೈರಸ್ ಮಾತ್ರವಲ್ಲ, ಸರಕಾರದ ಆದೇಶಗಳೂ ರೂಪಾಂತರಗೊಳ್ಳುತ್ತಿದೆ. ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಮಾಜಿ ಸಚಿವ, ಉಳ್ಳಾಲ ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಆದೇಶಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಕೊರೊನಾ ಹರಡುವಿಕೆಯ ಭಯ ಇದ್ದರೂ ಸರಕಾರ ಯಾವುದೇ ತಯಾರಿ ಮಾಡಿಲ್ಲ ಎಂದು ಆರೋಪಿಸಿದ ಅವರು, ಬ್ರಿಟನ್ ಕೊರೊನಾ ವೈರಸ್ ಕುರಿತು ಸಚಿವರಿಂದ ದಿನಕ್ಕೊಂದು ಸ್ಟೇಟ್ ಮೆಂಟ್ ಬರುತ್ತಿದೆ. ಕೊರೊನಾಕ್ಕಿಂತ ಸರಕಾರದ್ದೇ ಸಮಸ್ಯೆಯಾಗಿದೆ. ಜನರು ಗೊಂದಲದಲ್ಲಿದ್ದಾರೆ. ಸರಕಾರದ ಆದೇಶಗಳು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಸರಕಾರದ ಆದೇಶಗಳನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೊರೊನಾ ಲಸಿಕೆ ಕುರಿತು ಸರಕಾರಕ್ಕೆ ಸ್ಪಷ್ಟತೆಯೂ ಇಲ್ಲ, ಈ ಕುರಿತು ಸರಕಾರ ಕೂಡಲೇ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
Kshetra Samachara
30/12/2020 08:30 pm