ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಪಾಕಿಸ್ತಾನದ ಪರ ಎಸ್ ಡಿಪಿಐ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ರೀತಿಯ ಘೋಷಣೆ ಹಾಕಿದ್ದು ಯಾರೇ ಆದರೂ ಅದು ರಾಷ್ಟ್ರ ವಿರೋಧಿ. ಈ ನೆಲದಲ್ಲಿ ಹುಟ್ಟಿ, ಜಲ ಸ್ವೀಕರಿಸಿ, ಇಲ್ಲೇ ಚುನಾವಣೆಗೆ ನಿಂತು ಇಂಥ ಹರ್ಷೋದ್ಗಾರ ಮಹಾತಪ್ಪು. ತಕ್ಷಣ ಅವರನ್ನು ಬಂಧಿಸಲು ಪೊಲೀಸರಿಗೆ ಹೇಳಿದ್ದೇನೆ ಎಂದರು.
ಎಸ್ ಡಿಪಿಐ ಅನೇಕ ಬಾರಿ ರಾಷ್ಟ್ರ ವಿರೋಧಿ ಕೆಲಸ ಮಾಡಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಮತ್ತು ಮಂಗಳೂರಿನ ಸಿಎಎ ಘಟನೆಯೂ ಉದಾಹರಣೆ. ಅವರ ವಿರುದ್ಧ ಕೇಸುಗಳು ಆದಾಗಲೂ ಮುತ್ತಿಗೆ ಹಾಕುವ ಕೆಲಸ ಮಾಡಿದ್ದಾರೆ. ನಿಷೇಧಕ್ಕೆ ಸಂಬಂಧಿಸಿ ಕಾನೂನುಗಳನ್ನು ಗಟ್ಟಿ ಮಾಡಿ ಅದನ್ನು ಮಾಡ್ತೇವೆ. ಈಗಾಗಲೇ ಎಸ್ಪಿ ಜೊತೆ ಮಾತನಾಡಿದ್ದು, ಅಲ್ಲಿಗೆ ಹೋಗಿ ಪರಿಶೀಲಿಸಲು ಹೇಳಿದ್ದೇನೆ. ಚುನಾವಣೆ ಗೆದ್ದಾಗ ಹರ್ಷೋದ್ಗಾರಕ್ಕೆ ನನ್ನ ವಿರೋಧವಿಲ್ಲ. ಆದರೆ, ಈ ವೇಳೆ ರಾಷ್ಟ್ರವಿರೋಧಿ ಘೋಷಣೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
Kshetra Samachara
30/12/2020 05:17 pm