ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ವಠಾರದಲ್ಲಿ ಜಿಲ್ಲಾಡಳಿತ, ದ.ಕ. ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಮಂಗಳೂರು ಹಾಗೂ ಸಸಿಹಿತ್ಲು ಯುವಕ-ಯುವತಿ ಮಂಡಲ, ನವೋದಯ ಮಹಿಳಾ ಮಂಡಲ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ನಡೆಯಿತು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಸಮಾಜಕ್ಕೆ ಯುವಜನತೆಯ ಪಾತ್ರ ಮುಖ್ಯ. ಯುವಜನರು ತಮ್ಮ ಶಕ್ತಿ ಸದ್ಬಳಕೆ ಮಾಡುವ ಮುಖಾಂತರ ಸುಂದರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ಕೊರೊನಾ ದಿನಗಳಲ್ಲಿ ಸುರಕ್ಷತೆ ಪಾಲಿಸುವುದರ ಜೊತೆಗೆ ಇತರರಿಗೂ ಮಾದರಿಯಾಗಬೇಕು ಎಂದರು.
ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್,ದ.ಕ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರಾಜೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ವಿಭಾಗದ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸಹಾಯಕ ಕ್ರೀಡಾ ಅಧಿಕಾರಿ ವಿನೋದ್ ಕುಮಾರ್ ಸಸಿಹಿತ್ಲು, ನೆಹರು ಯುವ ಕೇಂದ್ರ ಮಂಗಳೂರಿನ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿ ಮುಳ್ಳು, ಮುಂಬೈ ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಕೋಟ್ಯಾನ್ ಕಾರ್ ಪುರುಷೋತ್ತಮ ಕೋಟ್ಯಾನ್ ಕಾರ್ , ಸಸಿಹಿತ್ಲು ಯುವಕ ಮಂಡಲ ಅಧ್ಯಕ್ಷ ಪ್ರವೀಣ್ ಕರ್ಕೇರ, ಸಾಂಸ್ಕೃತಿಕ ಕಾರ್ಯದರ್ಶಿ ಶರತ್ ಕುಮಾರ್, ಮಹಿಳಾ ಮಂಡಲ ಅಧ್ಯಕ್ಷೆ ರೋಹಿಣಿ ವಿನೋದ್ ಶ್ರೀಯಾನ್,ನವೋದಯ ಮಹಿಳಾ ಮಂಡಲ ಅಧ್ಯಕ್ಷೆ ಮಾಲತಿ ಡಿ.ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರದೀಪ್ ಡಿಸೋಜ ಸ್ವಾಗತಿಸಿದರು. ದಿಲೀಪ್ ಕರ್ಕೇರ ವಂದಿಸಿದರು. ಅಮಿತಾ ಯೋಗೀಶ್, ಅನಿಲ್ ಕಾಂಚನ್ ನಿರೂಪಿಸಿದರು. ಬಳಿಕ ಜಾನಪದ ಗೀತೆ, ನೃತ್ಯ, ಏಕಾಂಕ ನಾಟಕ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಗಿಟಾರ್, ಆಶು ಭಾಷಣ ಮತ್ತು ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
Kshetra Samachara
28/12/2020 07:34 pm