ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಕನ್ನಡ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದೆ.

ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ 114 ಗ್ರಾಮ ಪಂಚಾಯತ್ ನ 1,500 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಬೂತ್ ಗಳಲ್ಲಿ ಬೆಳಗ್ಗಿನ ಜಾವ ಮತದಾನ ಮಾಡಲು ಉದ್ದದ ಸರತಿ ಸಾಲು ಕಂಡು ಬಂದಿದೆ.

ಸುಳ್ಯ ಶಾಸಕ ಎಸ್.ಅಂಗಾರ ಅವರು ಅಮರಮುಡ್ನೂರು ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು. ಕುಟುಂಬ ಸಮೇತರಾಗಿ ಆಗಮಿಸಿ ಶಾಸಕ ಅಂಗಾರ ಅವರು ಮತದಾನ ಮಾಡಿದ್ದಾರೆ.

4 ತಾಲೂಕುಗಳ 114 ಗ್ರಾಮ ಪಂಚಾಯತ್ ಗಳ 1500 ಸ್ಥಾನಗಳಲ್ಲಿ ಒಟ್ಟು 3,421 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಕ್ಸಲ್ ಬಾದಿತ ಪ್ರದೇಶಗಳಲ್ಲಿ ವಿಶೇಷ ಸುರಕ್ಷತಾ ಪಡೆ ಕಾರ್ಯನಿರ್ವಹಿಸುತ್ತಿದ್ದರೆ,ಇನ್ನುಳಿದಂತೆ ಪೊಲೀಸರ ವಿವಿಧ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

Edited By : Manjunath H D
Kshetra Samachara

Kshetra Samachara

27/12/2020 09:47 am

Cinque Terre

13.82 K

Cinque Terre

0

ಸಂಬಂಧಿತ ಸುದ್ದಿ