ಉಡುಪಿ: ಜಲಪ್ರಳಯಕ್ಕೆ ತುತ್ತಾದ ಉಡುಪಿಗೆ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯಿಂದ NDRF ತಂಡ ರವಾನೆ ಮಾಡುವಂತೆ ಬಂದರು,ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರಿಗೆ ಸಚಿವರು ಸೂಚನೆ ನೀಡಿದ್ದು ತಕ್ಷಣ ಉಡುಪಿಯ ನೆರವಿಗೆ ಧಾವಿಸುವಂತೆ ಕೇಳಿಕೊಂಡಿದ್ದಾರೆ.
ಭಾರಿ ಮಳೆಗೆ ಮಲ್ಪೆಯಲ್ಲಿ 3 ಬೋಟ್ ಮುಳುಗಡೆಗೊಂಡಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು ಮೀನುಗಾರರು ದಡಸೇರಿಪ್ರಾಣಉಳಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿಮಂಗಳೂರಿನಿಂದ NDRFತಂಡವನ್ನು ಉಡುಪಿಗೆ ಕಳುಹಿಸುವಂತೆ ಸೂಚನೆ ನೀಡಿದ್ದೇನೆ. ವಿಶೇಷ ಸುರಕ್ಷತಾ ಉಪಕರಣಗಳು ಮತ್ತು ಬೋಟ್ ನೊಂದಿಗೆ NDRF ತಂಡ ಉಡುಪಿಗೆಹೋಗಿದೆ.
ಉಡುಪಿಯಲ್ಲಿ ನೆರೆಪೀಡಿತ ಕುಕ್ಕೆಹಳ್ಳಿ ಹಾಗು ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾಗಿ ಸಚಿವರು ಹೇಳಿದರು.
Kshetra Samachara
20/09/2020 10:22 am