ಉಡುಪಿ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಜ್ಜು: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್

ಉಡುಪಿ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಪಕ್ಷವು ಸಂಪೂರ್ಣವಾಗಿ ತಳ ಮಟ್ಟದಿಂದ ತಯಾರಿಯನ್ನು ಮಾಡುತ್ತಿದೆ. ಕಾರ್ಯಕರ್ತರು ಅಧಿಕಾರದ ಚುಕ್ಕಾಣೆಯನ್ನು ಹಿಡಿಯಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ,ಕಳೆದ ಬಾರಿ ಬಿಜೆಪಿ ಪಕ್ಷವು ಉಡುಪಿಯಲ್ಲಿ 102 ಪಂಚಾಯತ್ ಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಈ ಬಾರಿ 130 ಕ್ಕೂ ಅಧಿಕ ಪಂಚಾಯತ್ ಗಳಲ್ಲಿ ಪಕ್ಷ ಜಯಗಳಿಸಬೇಕು ಎಂಬ ಸಂಕಲ್ಪವನ್ನು ಪಕ್ಷ ಮಾಡಿದೆ.

ಇದಕ್ಕಾಗಿ ಸಾಕಷ್ಟು ತಯಾರಿ ಕೂಡಾ ನಡೆಯುತ್ತಿದೆ. ಎಲ್ಲಾ ಬೂತ್ ಗಳಲ್ಲಿ ಇರುವ ಕೇಂದ್ರ ಮತ್ತು ರಾಜ್ಯ ಸರಕಾರದ ಫಲಾನುಭವಿಗಳನ್ನು ಗುರುತಿಸಿ ಅವರಿಗಿದ್ದ ಸಮಸ್ಯೆ ಮತ್ತು ಸರಕಾರದ ಯೋಜನೆಗಳಿಂದ ಅವರಿಗಾದ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಈಗಾಗಲೇ ಆರಂಭ ಆಗಿದೆ. ಈ ಹಿಂದೆ ಉಡುಪಿಯಲ್ಲಿ 5 ಎಂಎಲ್ ಎಗಳು ಜಯಭೇರಿ ಬಾರಿಸಿದ ಹಾಗೆಯೇ ಈ ಬಾರಿ ಕೂಡಾ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಜಯ ಗಳಿಸಲಿದೆ ಎಂದರು.

Kshetra Samachara

Kshetra Samachara

12 days ago

Cinque Terre

4.63 K

Cinque Terre

0