ಉಡುಪಿ: ಹರಾಜು ಹಾಕಿದ ಮರಳು ಉಡುಪಿ ಜಿಲ್ಲೆಯ ಒಳಗೆ ಬಳಕೆಗೆ ಮಾತ್ರ ಅವಕಾಶ ನೀಡಿ: ಜಿಲ್ಲಾ ಬಿಜೆಪಿ ಆಗ್ರಹ

ಉಡುಪಿ: ಉಡುಪಿ ಜಿಲ್ಲಾಡಳಿತ ವಶಪಡಿಸಿಕೊಂಡ ಅಕ್ರಮ ಮರಳನ್ನು ಹರಾಜಿಗೆ ಹಾಕಲು ನಿರ್ದರಿಸಿದ್ದು, ಈ ಮರಳು ಹರಾಜಿನಲ್ಲಿ ಉಡುಪಿ ಜಿಲ್ಲೆಯ ಬಳಕೆಗೆ ಮಾತ್ರ ಉಪಯೋಗವಾಗುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಜಿಲ್ಲಾಡಳಿತ ಮತ್ತು ಖನಿಜ ಇಲಾಖೆ ಹಿರಿಯಡ್ಕದ ಶಿರೂರು ಮುಂತಾದೆಡೆ ಸುಮಾರು 1000 ಲೋಡ್ ಅಕ್ರಮ ಮರಳನ್ನು ವಶಪಡಿಸಿ ಇಟ್ಟಿದೆ. ಈ ಮರಳನ್ನು ಇದೀಗ ಹರಾಜು ಮಾಡಲು ನಿರ್ಧರಿಸಿದ್ದು, ಹರಾಜುದಾರರು ಖರೀದಿಸಿದ ಮರಳನ್ನು ಉಡುಪಿ ಜಿಲ್ಲೆಯ ಒಳಗೆ ಮಾತ್ರ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಮರಳನ್ನು ಖರೀದಿಸಿದವರು ಜಿಲ್ಲೆಯ ಹೊರಗಡೆ ಮರಳನ್ನು ಕೊಂಡು ಹೋಗುವುದು ಕಂಡು ಬಂದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲಿದೆ. ಯಾವುದೇ ಕಾರಣಕ್ಕೂ ಒಂದು ಲೋಡ್ ಮರಳು ಕೂಡ ಜಿಲ್ಲೆಯ ಗಡಿ ದಾಟಿ ಹೋಗಬಾರದು ಎಂದು ಹೇಳಿದರು.

Kshetra Samachara

Kshetra Samachara

12 days ago

Cinque Terre

13.64 K

Cinque Terre

1

  • manjunath s
    manjunath s

    ಎಲ್ಲಾ ಜಿಲ್ಲೆಗಳಲ್ಲಿ ಹೀಗೆ ಮಾಡಿದರೆ ಉತ್ತಮ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು 29 ರಾಜ್ಯವಾಗಿ ಮಾಡಬಹುದು