ಕಾಪು: ಜಿಲ್ಲೆಯಲ್ಲಿ ಸುರಿದ ಮಹಾಮಳೆ ಮತ್ತು ನೆರೆಯಲ್ಲಿ ಮನೆ,ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಸತಾಯಿಸದೆ ಶೀಘ್ರ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು,ಕಳೆದ ಬಾರಿ ಕೊಡಗಿನಲ್ಲಿ ನೆರೆ ಬಂದು ಹಾನಿಯಾದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಈಗ ಬಿಜೆಪಿ ಸರಕಾರ ಇದೆ.ಜಿಲ್ಲೆಯಲ್ಲಿ ಎಲ್ಲ ಐವರು ಬಿಜೆಪಿ ಶಾಸಕರಿದ್ದಾರೆ.ನೆರೆಯಿಂದಾಗಿ ಅನೇಕರು ಮನೆಗಳನ ಕಳೆದುಕೊಂಡಿದ್ದಾರೆ.
ಹಲವು ಮನೆಗಳು ಭಾಗಶಃ ಹಾನಿಗೊಂಡಿವೆ. ರಾಜ್ಯ ಸರಕಾರ ಉಡುಪಿ ಜಿಲ್ಲೆಯ ಎಲ್ಲ ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಯೋಗೀಶ್ ಶೆಟ್ಟಿ ಆಗ್ರಹಿಸಿದ್ದಾರೆ.
Kshetra Samachara
26/09/2020 11:50 am