ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ 'ಮಣಿಪಾಲ್ ಮ್ಯಾರಥಾನ್' ಫೆಬ್ರವರಿ 13ರಂದು ಆಯೋಜಿಸಲಾಗಿದೆ.
ಈ ಬಗ್ಗೆ ಮಣಿಪಾಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್ ಮತ್ತು ಮಾಹೆ ಸಹ ಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಮಾಹಿತಿ ನೀಡಿದರು.
ಡಾ. ಹೆಚ್.ಎಸ್ ಬಲ್ಲಾಳ್ ಮಾತನಾಡಿ , ಓಟವು ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಸುಧಾರಿಸಲು ಅತ್ಯುತ್ತಮ ವಿಧಾನ. ಇದು ನಿಮ್ಮ ಆರೋಗ್ಯದ ಪ್ರತಿ ಭಾಗಕ್ಕೂ ಪ್ರಯೋಜನ ನೀಡುತ್ತದೆ. ಒತ್ತಡ ನಿವಾರಿಸುತ್ತದೆ, ನಮ್ಮ ಮನಸ್ಥಿತಿ ಮತ್ತು ಆನಂದ ಹೆಚ್ಚಿಸುತ್ತದೆ. ಎಲ್ಲ ಕೋವಿಡ್ ನಿಯಮಾವಳಿ ಗಮನದಲ್ಲಿಟ್ಟು 2022 ರಲ್ಲಿ ನಮ್ಮ ಪರಂಪರೆಯ ಮಣಿಪಾಲ್ ಮ್ಯಾರಥಾನ್ ಅನ್ನು ಮರಳಿ ತರಲು ನಾವು ಉತ್ಸುಕರಾಗಿದ್ದೇವೆ. ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಜೊತೆಗೆ ಮಾಹೆ ಮ್ಯಾರಥಾನ್ ಕಾಲವನ್ನು ಜಿಲ್ಲೆಗೆ ಮರಳಿ ತರಲು ಉತ್ಸುಕರಾಗಿದ್ದೇವೆ ಎಂದರು.
ಶಾಸಕ ಕೆ. ರಘುಪತಿ ಭಟ್ ಮಾಹಿತಿ ನೀಡಿ, ಪ್ರಧಾನಿ ಮೋದಿಯವರು ನೀಡಿದ 'ಫಿಟ್ ಇಂಡಿಯಾ' ಕರೆ ಬೆಂಬಲಿಸಲು ಈ ಮ್ಯಾರಥಾನ್ ಆಯೋಜಿಸಲಾಗಿದೆ. ನಮ್ಮ ದೇಹ, ಮನಸ್ಸನ್ನು ಆರೋಗ್ಯವಾಗಿಡಲು ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ಜಿಲ್ಲೆಯ ಜನರು ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಹೆ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಡಾ.ವಿನೋದ್ ನಾಯಕ್, ಶ್ರೇಯಸ್ ಕಲ್ ಮುಂತಾದವರು ಉಪಸ್ಥಿತರಿದ್ದರು.
Kshetra Samachara
27/10/2021 12:17 pm