ಪಡುಬಿದ್ರೆ: ಪಡುಬಿದ್ರೆಯ ಹೆಜಮಾಡಿ ಕೋಡಿಯಲ್ಲಿ ಪುಷ್ಪರಾಜ್ ಅಮೀನ್ ಎಂಬವರು ಸ್ಪೆಷಲ್ ಪರ್ಪಸ್ ಬೋಟ್ ತಯಾರಿಸಿದ್ದಾರೆ.ಈ ಬೋಟ್ ಹಲವು ವೈಶಿಷ್ಟ್ಯ ಗಳನ್ನು ಹೊಂದಿದೆ.ವಿಷಯ ತಿಳಿದ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಹೆಜಮಾಡಿ ಕೋಡಿ ನದಿ ಕುದ್ರುವಿಗೆ ಭೇಟಿ ನೀಡಿ ಬೋಟಿನ ಪ್ರಾತ್ಯಕ್ಷಿಕತೆ ವೀಕ್ಷಿಸಿದರು.
ಪುಷ್ಪರಾಜ್ ಅಮೀನ್ ಅವರು ತಯಾರಿಸಿರುವ 4 ಇಂಚು ನೀರಿನಲ್ಲಿಯೂ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಪುಷ್ಪರಾಜ ಅಮೀನ್ ಮತ್ತು ಇವರ ತಂಡದ ವಿಶೇಷ ಪ್ರಯತ್ನಕ್ಕೆ ಶಾಸಕ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿ,ಮೆಚ್ಚುಗೆ ಸೂಚಿಸಿದ್ದಾರೆ.
Kshetra Samachara
29/04/2022 08:41 pm