ಬಜಪೆ : ಅಕ್ರಮ ಕಟ್ಟಡಗಳನ್ನು ಕೆಡಹುವ ಮೂಲಕ ಕವಚಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಶೇಷತೆಗಳನ್ನು ಬಿಂಬಿಸುವ ಟ್ಯಾಬ್ಲೋ ನಿನ್ನೆ ಮಂಗಳೂರಿನ ಬಜಪೆಯಲ್ಲಿ ನಡೆದ ದಸರಾ ಶೋಭಾಯಾತ್ರೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ರೂಪಿಸಲಾಗಿದ್ದ ಈ ಟ್ಯಾಬ್ಲೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕೇಸರಿ ಕುರ್ತಾ, ಫೈಜಾಮ ಧರಿಸಿದ್ದು, ಅಕ್ರಮ ಕಟ್ಟಡಗಳನ್ನು ಕೆಡಹುವ ನಿರ್ದೇಶನ ನೀಡುತ್ತಿದ್ದಾರೆ.
ಬುಲ್ಡೋಜರನ್ನು ಟ್ಯಾಬ್ಲೋದ ಮೇಲಿಟ್ಟು ಅದರ ಒಳಗೆ ಇದ್ದ ಇಬ್ಬರು ಚಾಲಕರು ಅನಧಿಕೃತ ಕಟ್ಟಡಗಳನ್ನು ಕೆಡಹುವ ಮಾದರಿಯಲ್ಲಿ ಯಂತ್ರ ತಿರುಗಿಸುತ್ತಿದ್ದಾರೆ.
ಇನ್ನು, ಯೋಗಿ ಆದಿತ್ಯನಾಥ್ ಅವರ ಭದ್ರತೆಗೆ ಗನ್‌ಮ್ಯಾನ್‌ಗಳು ಕೂಡಾ ಟ್ಯಾಬ್ಲೋದಲ್ಲಿದ್ದದ್ದು ವಿಶೇಷವಾಗಿತ್ತು.
Kshetra Samachara
06/10/2022 08:31 pm