ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪ್ರಳಯ ಬಾಧಿತ ಸಂಪಾಜೆಯನ್ನು ಸರಕಾರ ಕಡೆಗಣಿಸಿದೆ-ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಕಾಂಗ್ರೆಸ್ ಆರೋಪ

ಸುಳ್ಯ: ಭೂ ಕಂಪನ, ಪ್ರಳಯ ಮಳೆ ಹಾನಿಯಿಂದ ಸಂಪಾಜೆ ಗ್ರಾಮದ ಜನರು ತತ್ತರಿಸಿ ಹೋಗಿದ್ದು ಭಾರೀ ನಾಶ ನಷ್ಟ ಉಂಟಾಗಿದೆ. ಆದರೆ ಸರಕಾರ ಯಾವುದೇ ಸ್ಪಂದನೆ ನೀಡದೆ ಸಂಪೂರ್ಣ ಕಡಗಣಿಸಿದೆ. ಸಂಪಾಜೆ ಗ್ರಾಮವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತುತ್ತಾದರೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯಸಿದ್ದು ಖಂಡನೀಯ ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪಾಜೆ ಗ್ರಾಮದಲ್ಲಿ ಕಳೆದ 2 ತಿಂಗಳುಗಳ ಅವಧಿಯಲ್ಲಿ ಭೂಕಂಪನ ಹಾಗೂ ಪ್ರವಾಹದಿಂದಾಗಿ ಹಲವು ಮನೆಗಳು, ಅಂಗಡಿಗಳು ಹಾಗೂ ಕೃಷಿ ಪ್ರದೇಶಗಳು ಹಾನಿಯಾಗಿರುವುದು ಮತ್ತು ವಿದ್ಯುತ್ ಅವಘಡದಿಂದಾಗಿ ಕಲ್ಲುಗುಂಡಿಯ 3 ಅಂಗಡಿಗಳು ಅಗ್ನಿಗೆ ಆಹುತಿಯಾಗಿದೆ‌. ಭೂಕಂಪನದಿಂದ ಸಂಪಾಜೆ ಗ್ರಾಮದ ಹಲವು ಮನೆಗಳು ಬಿರುಕು ಬಿಟ್ಟಿದ್ದು , ಮುಖ್ಯಮಂತ್ರಿ ಸಚಿವರುಗಳು , ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರೂ ಇದುವರೆಗೂ ಯಾವುದೇ ಪರಿಹಾರ ದೊರಕದೆ ಇರುವುದು ಸರ್ಕಾರದ ನಿರ್ಲಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಕಾಟಾಚಾರಕ್ಕೆ ಎಲ್ಲರೂ ಭೇಟಿ ನೀಡಿ ಹೋಗುತ್ತಾರೆ ಆದರೆ ಇದರಿಂದ ಭೂಕಂಪನ, ಪ್ರವಾಹವಪೀಡಿತ ಸಂತ್ರಸ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಂಪಾಜೆ ಗ್ರಾಮದ ಹಲವು ಮನೆಗಳಿಗೆ, ಅಂಗಡಿಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ಹಾನಿಯಾಗಿದೆ. ಮನೆಗೆ ಹಾನಿಯಾದ ಸಂತ್ರಸ್ತರಿಗೆ ಕೇವಲ 10 ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗಿದೆ. ಆದರೆ ಹಾನಿಯಾದ ಅಂಗಡಿಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಹಾನಿಯಾದ ಕೃಷಿ ಪ್ರದೇಶಗಳಿಗೆ ಹೆಕ್ಟೇರ್ ಗೆ 28,000 ರೂ.ಗಳ ಪರಿಹಾರವನ್ನು ನೀಡುವುದಾಗಿ ಮಾಹಿತಿ ಬಂದಿದೆ. ರಾಜ್ಯ ಸರ್ಕಾರವು

ಹಳೆಯ ಮಾರ್ಗಸೂಚಿಗಳನ್ನು ಅನುಸರಿಸದೆ ಪ್ರಸ್ತುತ ನಷ್ಟ ಪ್ರಮಾಣವನ್ನು ಪರಿಗಣಿಸಿ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

Edited By :
Kshetra Samachara

Kshetra Samachara

11/08/2022 09:31 pm

Cinque Terre

6.49 K

Cinque Terre

0

ಸಂಬಂಧಿತ ಸುದ್ದಿ