ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರಿಗೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಭೇಟಿ:ಚಂಡಿಕಾ ಹೋಮದಲ್ಲಿ ಭಾಗಿ

ಕೊಲ್ಲೂರು: ಗೋವಾ ರಾಜ್ಯದ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.ಬಳಿಕ ರಂಗಪೂಜೆಯಲ್ಲಿ ಪಾಲ್ಗೊಂಡು ಕಷಾಯ ಸ್ವೀಕರಿಸಿದರು.

ಬೆಳಿಗ್ಗೆ ನಡೆದ ಚಂಡಿಕಾ ಹೋಮದಲ್ಲಿ ಮುಖ್ಯಮಂತ್ರಿ ಹಾಗು ಕುಟುಂಬಿಕರು ಭಾಗವಹಿಸಿದರು. ಇದಕ್ಕೂ ಮುನ್ನ ದೇಗುಲದ ವತಿಯಿಂದ ಸಾವಂತ್ ರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಮಹೇಶ್, ಉಪ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

02/08/2022 02:05 pm

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ