ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ನಾರಾಯಣ ಗುರುಗಳ ಪಠ್ಯ ಮರು ಸೇರ್ಪಡೆ ಸಂಪೂರ್ಣ ಯಶಸ್ಸು ಸಮಾಜಕ್ಕೆ ಸಲ್ಲುತ್ತದೆ !

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಮರು ಸೇರ್ಪಡೆ ಮಾಡುವ ವಿಚಾರದಲ್ಲಿ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸಮಾಜವು ರಸ್ತೆಗಳಿಯಲು ತೊಡಗಿತ್ತು. ಯಾವಾಗ ಇದೊಂದು ದೊಡ್ಡ ಮಟ್ಟದ ಹೋರಾಟದ ಸ್ವರೂಪ ಪಡೆಯುತ್ತದೆ ಎಂದು ತಿಳಿಯಿತೋ, ಆಗ ಸರಕಾರ ಮಣಿದಿದೆ. ಇದರ ಸಂಪೂರ್ಣ ಯಶಸ್ಸು ಸಮಾಜಕ್ಕೆ ಸಲ್ಲುತ್ತದೆ ಎಂದು ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಜನಶಕ್ತಿಗೆ ಮಹತ್ವವಿದೆ. ಜನಶಕ್ತಿ ಪ್ರಬಲವಾಗಿ ನಿಂತಲ್ಲಿ ಯಾವುದೇ ಆರ್ಥಿಕ ಹಾಗೂ ರಾಜಕೀಯ ಶಕ್ತಿಗೆ ಅದನ್ನು ಬಗ್ಗಿಸಲು ಸಾಧ್ಯವಿಲ್ಲ. ಅದು ಮತ್ತೊಮ್ಮೆ ಸಾಬೀತಾಗಿದೆ. ಸದ್ಯ ಈ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ - ಚೆನ್ನಯ ಹೆಸರು ಮರುನಾಮಕರಣ ಹೋರಾಟವು ಮತ್ತೆ ಗರಿಗೆದರಲಿದೆ ಎಂದು ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ನಾರಾಯಣ ಗುರುಗಳ ಪಠ್ಯ ಸೇರ್ಪಡೆಯಾಗುತ್ತದೆ ಎಂದು ತಿಳಿದ ತಕ್ಷಣ ಕೆಲವು ಪಕ್ಷಗಳ ರಾಜಕೀಯ ಮುಖಂಡರು ಮತ್ತೆ ಇದರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ‌. ಆದರೆ ಇವರು ಯಾರೂ ಪಠ್ಯ ವಿಚಾರದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹೋರಾಟ ನಡೆದಾಗ ಅದನ್ನು ಸರಿಪಡಿಸುತ್ತೇವೆ ಅಥವಾ ನಮಗೆ ಬೆಂಬಲ ನೀಡಿಲ್ಲ. ಹಿಂದೆ ಪಠ್ಯದಲ್ಲಿ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟಿಲ್ಲ. ಇದು ರಾಜಕೀಯ ಹುನ್ನಾರ ಎಂದು ಘಂಟಾಘೋಷವಾಗಿ ಹೇಳಿ ತಿರುಗಾಡುತ್ತಿದ್ದರು. ಅಂಥವರು ತಮ್ಮ ಹೋರಾಟದ ಫಲವಾಗಿ ಪಠ್ಯದ ವಿಚಾರದಲ್ಲಿ ಜಯ ಲಭಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

13/07/2022 01:41 pm

Cinque Terre

6.55 K

Cinque Terre

1

ಸಂಬಂಧಿತ ಸುದ್ದಿ