ಮಂಗಳೂರು: ರಾಜ್ಯದಲ್ಲಿ ಆಝಾನ್ ವಿರುದ್ಧ ಸುಪ್ರಭಾತ ಅಭಿಯಾನದ ಕುರಿತು ಮಂಗಳೂರಿನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ನಾಗರಿಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜಬಾವ್ದಾರಿ. ಆದರೆ ದುರಾದೃಷ್ಟವಶಾತ್ ಸರ್ಕಾರ ಮುಂದೆ ಎಷ್ಟೇ ಮೊರೆ ಹೋದರೂ ಇದು ಸಾಧ್ಯವಾಗಿಲ್ಲ. ಬೆಳಗ್ಗಿನ ಅಜಾನ್ ಜಾತ್ಯಾತೀತ ರಾಷ್ಟ್ರಕ್ಕೆ ಹೇಳಿ ಮಾಡಿಸಿರೋದಲ್ಲ ಎಂದು ಕಿಡಿಕಾರಿದ್ದಾರೆ.
'ಅಲ್ಲಾ ಒಬ್ಬನೇ. ಬೇರೆ ಯಾವ ದೇವರಿಲ್ಲ ಅನ್ನೋದನ್ನು ಪ್ರತಿಯೊಬ್ಬ ಹಿಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೆಳಗ್ಗಿನ ಜಾವ ಅಜಾನ್ ಎಲ್ಲರ ನಿದ್ದೆ ಹಾಳು ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಕೂಡಾ ಇದೆ. ಆದರೆ ಕರ್ನಾಟಕ ಸರ್ಕಾರ ಸುಧೀರ್ಘ ನಿದ್ರೆಯಲ್ಲಿದೆ. ಸರ್ಕಾರಕ್ಕೆ ಎಷ್ಟೇ ಒತ್ತಡ ಹಾಕಿದರೂ ಬೆಳಗ್ಗಿನ ಅಜಾನ್ ಧ್ವನಿ ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರದ ನಿರ್ಧಾರ ತೆಗೆದುಕೊಳ್ಳದೇ ಇದ್ದಾಗ ಸಮಾಜವೇ ಮುಂದೆ ನಿಂತು ನಿರ್ಧಾರ ತೆಗೆದುಕೊಂಡಿದೆ. ನೀವು ಕಾನೂನು ಮೀರಿದವರನ್ನು ಬಂಧಿಸದಿದ್ದರೆ ನಾವೂ ಕಾನೂನು ಮೀರುತ್ತೇವೆ. ಹಿಡಿಯೋದಿದ್ದರೆ ಎಲ್ಲರನ್ನೂ ಹಿಡಿಯಿರಿ ಎಂಬ ಸವಾಲನ್ನು ಸಮಾಜ ಹಾಕಿದೆ. ಇದು ಸ್ವಾಗತಾರ್ಹ ನಿರ್ಧಾರವಾಗಿದೆ' ಎಂದರು.
PublicNext
09/05/2022 04:45 pm