ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮಸೀದಿಗಳ ಶಬ್ದ ನಿಯಂತ್ರಿಸಲು ಡಿವೈಸ್ ಅಳವಡಿಸಿ; ಮೌಲಾನಾ ಕರೆ

ಮಲ್ಪೆ: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಆಝಾನ್ ಶಬ್ದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೈಕ್‌ಗಳಿಗೆ ಆಳವಡಿಸಲು ಡಿವೈಸ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಶಬ್ದ ನಿಯಂತ್ರಣದಲ್ಲಿರುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಡಾ.ಮೊಹಮ್ಮದ್ ಮನ್ಸೂದ್ ಇಮ್ರಾನ್ ಸಹಾಬ್ ರಶಾದಿ ಹೇಳಿದ್ದಾರೆ.

ಮಲ್ಪೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕಡೆಯಿಂದ ಯಾರಿಗೂ ಯಾವುದೇ ತೊಂದರೆ ಕೊಡುವುದು ಸರಿಯಲ್ಲ. ಅದಕ್ಕಾಗಿ ಈ ಡಿವೈಸ್‌ನ್ನು ಸಿದ್ಧಪಡಿಸಲಾಗಿದೆ. ಆ ಡಿವೈಸ್ ಅಳವಡಿಸಿದರೆ ಎಷ್ಟು ಶಬ್ದ ಜಾಸ್ತಿ ಮಾಡಿದರೂ ನಿಯಂತ್ರಣದಲ್ಲಿರುತ್ತದೆ. ಪ್ರತಿ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಮಸೀದಿಗಳ ಆಡಳಿತ ಸಮಿತಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಿ ಅಳವಡಿಸುವಂತೆ ಮನವಿ ಮಾಡಲಾಗುವುದು ಎಂದರು.

ಈ ಡಿವೈಸ್‌ಗೆ ಮಸೀದಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ ಹಲವು ಮಸೀದಿಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ಆದಷ್ಟು ಬೇಗ ರಾಜ್ಯದ ಎಲ್ಲ ಮಸೀದಿಗಳಲ್ಲೂ ಇದನ್ನು ಅನುಷ್ಠಾನ ಮಾಡಲಾಗುವುದು. ಇದು ಕೇವಲ ಮಸೀದಿಗಳಲ್ಲಿ ಮಾತ್ರವಲ್ಲ ದೇವಸ್ಥಾನ, ಚರ್ಚ್, ಗುರುದ್ವಾರ ಗಳಲ್ಲಿಯೂ ಅಳವಡಿಸಬೇಕಾಗಿದೆ. ಯಾರಿಗೂ ಯಾರೂ ತೊಂದರೆ ಕೊಡಬಾರದು ಎಂದು ಅವರು ಹೇಳಿದರು.

ಆಝಾನ್‌ಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯವರು ಮಸೀದಿ ಮುಂದೆ ಭಜನಾ ಹನುಮಾನ್ ಚಾಲೀಸ್ ಪಠಿಸುವುದಾಗಿ ಈಗಾಗಲೇ ಕರೆ ನೀಡಿದ್ದಾರೆ. ಆದರೆ ಇದಕ್ಕೆ ಯಾವುದೇ ಮಸೀದಿ ಆಡಳಿತ ಸಮಿತಿಯವರು ಹಾಗೂ ಯುವ ಜನತೆ ಯಾವುದೇ ರೀತಿಯಲ್ಲೂ ವಿರೋಧ ಮಾಡಬಾರದು ಎಂದು ಡಾ. ಮೊಹಮ್ಮದ್ ಮನ್ಸೂದ್ ಇಮ್ರಾನ್ ಮನವಿ ಮಾಡಿದರು.

Edited By : Nagesh Gaonkar
PublicNext

PublicNext

09/05/2022 01:23 pm

Cinque Terre

52.34 K

Cinque Terre

7

ಸಂಬಂಧಿತ ಸುದ್ದಿ