ಸುಂಕದಕಟ್ಟೆ:ಪುರಾಣ ಪ್ರಸಿದ್ಧ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ವಿಶೇಷ ಪಲ್ಲಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ಕ್ಷೇತ್ರದಲ್ಲಿ ಆರಾಧಿಸುವ ಅನ್ನಪೂರ್ಣೇಶ್ವರಿ ದೇವಿಗೆ ಪಲ್ಲಪೂಜೆ ವಿಶೇಷವಾಗಿದೆ. ನಂತರ ಅನ್ನಪ್ರಸಾದವನ್ನು ಭಕ್ತರಿಗೆ ಶಾಸಕ ಡಾ.ಭರತ್ ಶೆಟ್ಟಿ ಅವರು ಸ್ವತಃ ಬಡಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹರಿಪ್ರಸಾದ ಕಜೆ, ಸುಕೇಶ್ ಮಾಣೈ, ಅನಿಲ್ ಕುಮಾರ್, ಪಂಚಾಯತ್ ಸದಸ್ಯೆ ಸವಿತಾ,ವಿಜಯ,ಕ್ಷೇತ್ರದ ಮೊಕ್ತೇಸರರಾದ ನಾರಾಯಣ ಪೂಜಾರಿ, ಕಾರ್ಯದರ್ಶಿ ಜ್ಯೋತಿ ನಾರಾಯಣ ಪೂಜಾರಿ, ದೀಪಕ್ ಕೋಟ್ಯಾನ್ ಗುರುಪುರ, ಪದ್ಮನಾಭ ಕೋಟ್ಯಾನ್, ಎನ್ .ಕೆ ಬಂಗೇರ, ದೇವಳದ ಮೊಕ್ತೇಸರರು ಉಪಸ್ಥಿತರಿದ್ದರು.
Kshetra Samachara
30/04/2022 02:35 pm