ಮುಲ್ಕಿ: ಮಯೂರಿ ಫೌಂಡೇಶನ್ (ರಿ) ಮುಲ್ಕಿ ಸಂಸ್ಥೆಯ ಆಶ್ರಯದಲ್ಲಿ ಅಖಂಡ ಭಾರತವನ್ನಾಳಿದ ಚಕ್ರವರ್ತಿ ಸಾಮ್ರಾಟ್ ಅಶೋಕ ಚಕ್ರವರ್ತಿಯ ಜನ್ಮ ದಿನೋತ್ಸವ ಕಾರ್ಯಕ್ರಮವು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದ ಎದುರು ಭಾಗದ ಬೃಹತ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಭಾ ಸದಸ್ಯ,ಹಿಂದೂ ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಸ್ವಾಮಿ ನೆರವೇರಿಸಿ ಪ್ರಧಾನ ಭಾಷಣ ಮಾಡಿ ಭಾರತ ಅಖಂಡತೆಯ ಕೃಷಿ ಪ್ರಧಾನ ದೇಶವಾಗಿದ್ದು ನಮಗೆ ಹೆಮ್ಮೆಯಾಗಿದೆ. ನಮ್ಮನ್ನು ಎದುರಿಸುವ ಯಾವುದೇ ಶಕ್ತಿಯ ಜೊತೆ ರಾಜಿ ಬೇಡ, ಭವ್ಯ ಭಾರತ ನಿರ್ಮಾಣ ನಮ್ಮ ಪ್ರಧಾನ ಗುರಿಯಾಗಿರಲಿ ಸಾಮ್ರಾಟ್ ಅಶೋಕ ಹಿಂದಿನ ಕಾಲದ ಮಹಾನ್ ವ್ಯಕ್ತಿಯಾಗಿದ್ದು ಕೇಂದ್ರ ಸರ್ಕಾರ ಸಾಮ್ರಾಟ್ ಅಶೋಕನ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್,ಉದ್ಯಮಿಗಳಾದ ಸುಧೀರ್ ವಿ ಶೆಟ್ಟಿ,ಜಯರಾಮ್ ಎನ್ ಶೆಟ್ಟಿ,ಕೆ ಸದಾಶಿವ ಶೆಟ್ಟಿ,ಕುಶಲ್ ಹೆಗ್ಡೆ,ಕೆ ಎಮ್ ಶೆಟ್ಟಿ,ಬಿ ವಿವೇಕ್ ಶೆಟ್ಟಿ,ಸಿ ಎ ಸದಾಶಿವ ಶೆಟ್ಟಿ,ಡಾ|ಸತ್ಯಪ್ರಕಾಶ್ ಶೆಟ್ಟಿ,ಪರಿಸರ ಪ್ರೇಮಿ ಸಮಿತಿ ಸ್ತಾಪಕ ಟಿ ಜಯಕೃಷ್ಣ ಶೆಟ್ಟಿ,ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು,ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ,ಮಯೂರಿ ಫೌಂಡೇಶನ್ (ರಿ) ನ ಸಂಸ್ಥಾಪಕ ಮತ್ತುಅಧ್ಯಕ್ಷ ಜಯ ಕೆ ಶೆಟ್ಟಿ, ಪದಾಧಿಕಾರಿಗಳಾದ ಜೀವನ್ ಕೆ.ಶೆಟ್ಟಿ, ದೇವಪ್ರಸಾದ್ ಪುನರೂರು, ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ ಸುಬ್ರಹ್ಮಣ್ಯ ಸ್ವಾಮಿ ರವರನ್ನು ಮಯೂರಿ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ರಾಜ್ಯಸಭಾ ಸದಸ್ಯ ಡಾ. ಸುಬ್ರಮಣ್ಯ ಸ್ವಾಮಿಯವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚಕ ಶ್ರೀಪತಿ ಉಪಾಧ್ಯಾಯ ಹಾಗೂ ನರಸಿಂಹ ಭಟ್ ರಿಂದ ಪ್ರಸಾದ ಸ್ವೀಕರಿಸಿದರು. ಡಾ. ಸುಬ್ರಹ್ಮಣ್ಯ ಸ್ವಾಮಿ ಆಗಮನದ ನಿಮಿತ್ತ ಮುಲ್ಕಿ ಪರಿಸರದಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಳಿಕ ವಿಠಲ ನಾಯಕ ಕಲ್ಲಡ್ಕ ರವರಿಂದ ಗೀತ ಸಾಹಿತ್ಯ ಸಂಭ್ರಮ ಹಾಗೂ ಸಮನ್ವಯ ಡ್ಯಾನ್ಸ್ ಕಂಪೆನಿ ಮತ್ತು ಮಹಾಮಾಯಾ ಆರ್ಟ್ಸ್ ಫೌಂಡೇಶನ್ ಬೆಂಗಳೂರು ತಂಡದಿಂದ "ವಸುದೈವ ಕುಟುಂಬಕಂ" ನೃತ್ಯ ರೂಪಕ ಪ್ರದರ್ಶನ ನಡೆಯಿತು.
Kshetra Samachara
14/04/2022 09:47 pm