ಉಡುಪಿ: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಇವತ್ತು ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರದ ಬೃಹತ್ ಸಮಾರಂಭದಲ್ಲಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ವಿಶೇಷ ಆಹ್ವಾನಿತರಲ್ಲಿ ಒಬ್ಬರಾಾಗಿ ಪಾಲ್ಗೊಂಡರು.ರಾಜ್ಯದಿಂದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ , ಇಸ್ಕಾನ್ ನ ಮಧುಪಂಡಿತ ದಾಸ್ ಕೂಡಾ ಆಗಮಿಸಿದ್ದರು. ಸಮಾರಂಭದಲ್ಲಿ ಮಠಾಧೀಶರು, ಸ್ವಾಮೀಜಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೊಳಿಸಲಾಗಿತ್ತು.
ಸ್ವಾಮೀಜಿಯವರನ್ನು ಕಾಡಿದ ಟ್ರಾಫಿಕ್ ಜಾಮ್ :
ಲಕ್ನೋದಲ್ಲಿ ಶುಕ್ರವಾರ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು .ಲಕ್ಷಾಂತರ ಜನ ಸಮಾರಂಭಕ್ಕೆ ಆಗಮಿಸಿದ್ದರಿಂದ ಮತ್ತು ಮೋದಿ ,ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಆಗಮಿಸಿದ್ದರಿಂದ ಅವರ ಬೆಂಗಾವಲು ವಾಹನಗಳ ಸರತಿ ಸಾಲೇ ಪ್ರಮುಖ ರಸ್ತೆಗಳಲ್ಲಿ ಸೇರಿದ್ದರಿಂದ ಉಂಟಾದ ಟ್ರಾಫಿಕ್ ಜಾಮ್ ನಲ್ಲಿ ಅನೇಕರು ಸಿಲುಕಿದರು .ಸ್ವತಃ ಪೇಜಾವರ ಶ್ರೀಗಳ ವಾಹನವೂ ಸರತಿಯಲ್ಲಿ ಮುಂದೆ ಹೋಗದ ಪರಿಸ್ಥಿತಿ ಎದುರಾದಾಗ ಶ್ರೀಗಳು ವಾಹನದಿಂದ ಇಳಿದು ಸುಮಾರು ಎರಡು ಕಿ. ಮೀ ನಡೆದೇ ಸ್ಟೇಡಿಯಂ ತಲುಪಿದರು.
PublicNext
25/03/2022 06:58 pm