ಉಡುಪಿ: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ರಘುಪತಿ ಭಟ್ ಆಕ್ರೋಶಿತರಾಗಿ 'ಬಿರುನುಡಿ'ಗಳ ಚಾಟಿಯನ್ನೇ ಬೀಸಿದರು.
ಸದಾ ಸೌಮ್ಯವಾಗಿಯೇ ಮಾತನಾಡುವ ಭಟ್ಟರು, ಪ್ರತಿಭಟನೆಯಲ್ಲಿ ವಾಗ್ಭಾಣವನ್ನೇ ಬಿಟ್ಟರು. ಕಠೋರ ಮುಸ್ಲಿಮರು ಶರೀಯತ್ ಕಾನೂನು ಪಾಲಿಸಲು ತಯಾರಿರಲಿ. ಹರ್ಷನನ್ನು ಕೊಂದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲು ಅವಕಾಶ ಕೊಡಬೇಕು...
ನೀವೇ ನಿರ್ಧರಿಸಿ. ಶರೀಯತ್ ಕಾನೂನು ಪ್ರಕಾರ ಶಿಕ್ಷೆ ನೀಡುತ್ತೀರಾ? ಶರೀಯತ್ ನಂತೆ ಶಿಕ್ಷೆ ನೀಡಿದರೆ ಹಿಜಾಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ, ತರಗತಿಯಲ್ಲಿ ಹಿಜಾಬ್ ಬೇಕು ಎಂದರೆ ಅದು ಆಗುವುದಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಲಾಯನ ಮಾಡಬಾರದು ಎಂದು ಹೇಳಿದ ಅವರು, ಹಿಜಾಬ್ ವಿಚಾರದಲ್ಲಿ ನಿಮ್ಮ ನಿಲುವೇನು? ಹರ್ಷ ಕೊಲೆಯ ಬಗ್ಗೆ ನಿಲುವೇನು?
ದುಬೈ, ಸೌದಿಗಳಲ್ಲಿ ಶರೀಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ.
ಹಿಂದೂಗಳ ಕೆಲ ಪದ್ಧತಿ ಕಾಲ ಕಾಲಕ್ಕೆ ಬದಲಾವಣೆಯಾಗಿದೆ.
ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯ ವಿವಾಹ, ಅಸ್ಪೃಶ್ಯತೆ- ಅಸಮಾನತೆ ತೊಡೆದುಹಾಕಿದ್ದಾರೆ.
ಶರೀಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲಿಮರಿಗೆ ಕಡ್ಡಾಯ ಮಾಡಿ.
ನಾವು ಭಾರತದ ಸಂವಿಧಾನ ಒಪ್ಪುವವರು. ಒಳ್ಳೆಯ ಮುಸ್ಲಿಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಮಲ್ಲಿ ಹಿಜಾಬ್ ಬೇಕು ಎನ್ನುವವರಿಗೆ ಶರೀಯತ್ ಕಾನೂನು ಜಾರಿಗೆ ತನ್ನಿ. ಅದೇ ರೀತಿ ಕೊಲೆ, ಅತ್ಯಾಚಾರ, ಭಯೋತ್ಪಾದನೆ ಎಸಗಿದಾಗ ಶರೀಯತ್ ಕಾನೂನು ಪ್ರಕಾರ ಶಿಕ್ಷೆ ಬೇಡ ಎಂದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
28/02/2022 02:05 pm