ಉಡುಪಿ: ಉಡುಪಿಯಲ್ಲಿ ನಡೆದ ಶಾಂತಿ ಸಭೆಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ) ಗೈರು ಹಾಜರಾಗಿದೆ ಎಂಬ ಸಂದೇಶಗಳು ರವಾನೆಯಾಗುತ್ತಿವೆ.ಆದರೆ ನಮಗೆ ಈ ಶಾಂತಿ ಸಭೆಗೆ ಯಾವುದೇ ಮಾಹಿತಿ ಅಥವಾ ಆಮಂತ್ರಣ ಇರಲಿಲ್ಲ ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಂ ಹೇಳಿದ್ದಾರೆ.
ಕ್ಯಾಂಪಸ್ ಫ್ರಂಟ್ ನಾಯಕರನ್ನು ಆಹ್ವಾನಿಸುತ್ತಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೌಹಾರ್ದತೆಯಿಂದ ಶಾಂತಿ ಕಾಪಾಡುವ ಸಲುವಾಗಿ ಖಂಡಿತವಾಗಿಯೂ ಕ್ಯಾಂಪಸ್ ಫ್ರಂಟ್ ನಾಯಕರು ಶಾಂತಿ ಸಭೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಸ್ಪಷ್ಟಪಡಿಸೊದ್ದಾರೆ.
ಅಂದಹಾಗೆ ,ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಹಿಜಾಬ್ ಹೋರಾಟವನ್ನು ಸಿಎಫ್‌ಐ ಬೆಂಬಲಿಸುತ್ತಿದೆ.
Kshetra Samachara
14/02/2022 11:28 am