ಉಡುಪಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದ) ಸಿಪಿಐಯಂ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಇದರ ಭಾಗವಾಗಿ ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಯಿತು. ತನ್ನ ವೈಫಲ್ಯಗಳನ್ನು ಮರೆ ಮಾಚಲು ಸರಕಾರ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಹೊರಟಿದೆ.ಇದು ಸಂವಿಧಾನ ವಿರೋಧಿ ನಡೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರಾಜ್ಯ ಮುಖಂಡರಾದ ಕೆ.ಶಂಕರ್, ಮಹಾಬಲ ಹೊಡೆಯರಹೊಬಳಿ,ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ , ಸುರೇಶ್ ಕಲ್ಲಾಗಾರ,ವೆಂಕಟೇಶ ಕೋಣಿ,ಎಚ್ ನರಸಿಂಹ, ಜಿಲ್ಲಾ ಸಮಿತಿ ಸದಸ್ಯರಾದ ಶಶಿಧರ್ ಗೊಲ್ಲ,ಉಮೇಶ್ ಕುಂದರ್,ಕವಿರಾಜ್. ಎಸ್,ರಾಮ ಕಾರ್ಕಡ,ಬಲ್ಕೀಸ್ ,ರಾಜು ದೇವಾಡಿಗ,ಉಡುಪಿ ತಾಲೂಕು ಸಮಿತಿ ಸದಸ್ಯರಾದ ನಳಿನಿ,ಸರೋಜ,ಗೊಡ್ವಿನ್, ಪಕ್ಷದ ಸದಸ್ಯರಾದ ವಿದ್ಯರಾಜ್ ,ಮೋಹನ್, ಚಂದ್ರ ಶೇಕರ್,ಶೀಲಾವತಿ,ಬುದ್ಯ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/02/2022 11:15 am