ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.ಕೃಷ್ಣಮಠದ ರಾಜಾಂಗಣದಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ,ರಾಹುಲ್ ಗಾಂಧಿಯವರು ಹಿಂದೂ ಮತ್ತು ಹಿಂದುತ್ವ ಎರಡೂ ಬೇರೆ ಬೇರೆ ಎಂಬ ವ್ಯಾಖ್ಯಾನ ಕೊಡುತ್ತಿದ್ದಾರೆ.
ನಾನು ಹಿಂದು, ಮೋದಿ ಹಿಂದುತ್ವವಾದಿ ಎನ್ನುತ್ತಿದ್ದಾರೆ.ದೇಶದಲ್ಲಿ ಹಿಂದೂಗಳನ್ನು ಬಕ್ರ ಮಾಡುವ ಹೊಸ ಸಿದ್ಧಾಂತ ಹೊರಡಿಸಲಾಗಿದೆ!
ಆ ಯುವ ನಾಯಕ ಹಿಂದೂ ಅಲ್ಲ . ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಅವರಿಗೆ ಗೊತ್ತಿಲ್ಲ.ಪೂಜೆ,ಪಾಠ,ಪ್ರವಚನದ ಮಟ್ಟದಲ್ಲಿ ಇದ್ದರೆ ಅದು ಹಿಂದು.ಅದೇ ಹಿಂದೂ ಧರ್ಮದ ರಕ್ಷಣೆಗೆ ಖಡ್ಗ ಎತ್ತಿದರೆ ಅದು ಹಿಂದುತ್ವ ಎಂದು ಅರ್ಥ. ಆತ ಚಿರ ಯವ್ವನದ ವಿಪಕ್ಷ ನಾಯಕ ಎಂದು ಸಂಸದ ತೇಜಸ್ವಿ ಸೂರ್ಯ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
PublicNext
26/12/2021 11:27 am