ಕಾಪು : ಸಮಗ್ರ ಜೀರ್ಣೋದ್ದಾರ ಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿ ಗುಡಿಗೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದು 99 ಶೀಲಾ ಸೇವೆ ಸಮರ್ಪಸಿ ಜೀರ್ಣೋದ್ದಾರ ಕಾರ್ಯ ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಅವರು ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಜೀರ್ಣದ್ದಾರಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡುವ ಕ್ರಮ ಕೈಗೊಳ್ಳಲಾಗುವುದು.ದೇವಿಯ ಜೀರ್ಣೋದ್ದಾರ ಕಾರ್ಯ ಯಾವುದೇ ಅಡೆ ತಡೆ ಬಾರದೆ ಸಾಂಗವಾಗಿ ನೆರವೇರುವಂತೆ ದೇವರು ಅನುಗ್ರಹಹಿಸಲಿ ಎಂದರು.ಈ ಸಂದರ್ಭ ದೇವಾಲದ ಜೀರ್ಣೋದ್ದಾರ ಕಾರ್ಯಕ್ಕೆ ಸರಕಾರದ ವತಿಯಿಂದ ರೂ 19 ಕೋಟಿ ಅನುದಾನ ಬಿಡುಗಡೆ ಗೊಳಿಸುವಂತೆ ಜೀರ್ಣೋದ್ದಾರ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿ ಭೇಟಿ ನೀಡಿದ ಬಸವರಾಜ್ ಬೊಮ್ಮಾಯಿ ಯವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿಸಲಾಯಿತು.ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ, ಕಾಪು ಶಾಸಕ ಲಾಲಾಜಿ ಮೆಂಡನ್, ರಮೇಶ್ ಹೆಗ್ಡೆ ಕಲ್ಯಾ, ಪ್ರಶಾಂತ್ ಕುಮಾರ್ ಶೆಟ್ಟಿ, ವಾಸುದೇವಾಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಯೋಗೀಶ್ ಶೆಟ್ಟಿ,
ಕುಮಾರ ಗುರು ತಂತ್ರಿ ಶ್ರೀನಿವಾಸ್ ತಂತ್ರಿ, ದೇವಿ ಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಗಂಗಾಧರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/10/2021 06:03 pm