ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಹಿಂ ಜಾ ವೇ ಕಾರ್ಯಕರ್ತರ ಮೇಲೆ ಪೋಲಿಸರಿಂದ ಹಲ್ಲೆ : ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂ ಜಾ ವೇ ಕಾರ್ಯಕರ್ತರ ಮೇಲೆ ಪೋಲಿಸರಿಂದ ಹಲ್ಲೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಕುಂದಾಪುರದಲ್ಲಿ ರಾತ್ರಿ ನಡೆದಿದೆ.

ಭಾಷಣವೊಂದರ ವೀಡಿಯೊ ತಿರುಚಿದ ಅನ್ಯಕೋಮಿನ ಯುವಕನನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರಶ್ನಿಸಿದ್ದರು.ಮಾತಿಗೆ ಮಾತು ಬೆಳೆದು ಕುಂದಾಪುರ ಕಾಲೇಜಿನಲ್ಲಿ ಘರ್ಷಣೆ ನಡೆದಿತ್ತು.ಈ ವಿಷಯಕ್ಕೆ ಸಂಬಂದಿಸಿ ಹಿಂದು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

ಈ ವೇಳೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಕುಂದಾಪುರ ಪೋಲಿಸರಿಂದ ಹಲ್ಲೆ ನಡೆದಿದೆ ಎಂಬುದು ಹಿಂಜಾವೇ ಕಾರ್ಯಕರ್ತರ ಆರೋಪ.

ಹಲ್ಲೆ ಖಂಡಿಸಿ ಕುಂದಾಪುರ ಠಾಣೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.ಈ ವೇಳೆ ಸ್ಥಳಕ್ಕೆ ಡಿವೈಎಸ್‌ಪಿ,ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಕಾರ್ಯಕರ್ತರ ಮನವೊಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

09/10/2021 10:21 am

Cinque Terre

6.9 K

Cinque Terre

1

ಸಂಬಂಧಿತ ಸುದ್ದಿ