ಕುತ್ಯಾರು: ಕೇಂದ್ರ ಕೃಷಿ, ಜನಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ದಾರೆ.ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು ,ಸಂಜೆ ಕಾಪು ತಾಲೂಕಿನ ಪಡುಕುತ್ಯಾರು ಆನೆಗುಂದಿ ಮಹಾ ಸಂಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಚಾತುರ್ಮಾಸ್ಯ ಆಚರಣೆ ಮಾಡುತ್ತಿದ್ದಾರೆ.ಸಂಸದೆ ಶೋಭಾ ಕರಂದ್ಲಾಜೆ ಮಠಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಮಾಡಿದರು. ಮಠದಲ್ಲಿ ಧಾರ್ಮಿಕ ಸಭೆ ನಡೆಯಿತು. ಮೊದಲ ಬಾರಿ ಸಚಿವರಾಗಿ ಕ್ಷೇತ್ರಕ್ಕೆ ಬಂದ ಕಾರಣ ಸಂಸ್ಥಾನದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ವಿಶ್ವಕರ್ಮ ಸಮಾಜ ಬಹಳ ಚಿಕ್ಕ ಸಂಖ್ಯೆಯಲ್ಲಿರುವ ಸಮಾಜ. ಕಲೆ, ಧಾರ್ಮಿಕ ಜಾಗೃತಿಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ದೇಶ ಮತ್ತು ಹಿಂದುತ್ವದ ವಿಚಾರದಲ್ಲಿ ವಿಶ್ವಕರ್ಮ ಸಮಾಜ ಯಾವತ್ತೂ ಹಿಂದೆ ನಿಂತಿಲ್ಲ ಎಂದರು. ವಿಶ್ವಕರ್ಮ ಸಮಾಜದ ಯಾವುದೇ ಬೇಡಿಕೆ ಗಳಿದ್ದರೂ ಅದನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬದ್ಧವಾಗಿವೆ ಎಂದರು.
Kshetra Samachara
17/09/2021 05:37 pm