ಉಡುಪಿ: ಓಸ್ಕರ್ ಆರೋಗ್ಯಕ್ಕೆ ಉಡುಪಿ ಶೋಕ ಮಾತಾ ಚರ್ಚಿನಲ್ಲಿ ಪ್ರಾರ್ಥನೆ

ಉಡುಪಿ: ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸುಧಾರಣೆಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ಶೋಕಮಾತಾ ಚರ್ಚ್ ನಲ್ಲಿ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.
ಈ ವೇಳೆ ಉಡುಪಿ ಚರ್ಚಿನ ಧರ್ಮಗುರು ವಂ|ಚಾರ್ಲ್ಸ್‌ ಮಿನೇಜಸ್‌, ಸಹಾಯಕ ಧರ್ಮಗುರು ವಂ|ಅಶ್ವಿನ್‌ ಆರಾನ್ಹಾ, ಇತರ ಧರ್ಮಗುರುಗಳಾದ ವಂ|ರೋಯ್ಸನ್‌, ವಂ|ಸ್ಟೀಫನ್‌, ವಂ|ವಿಲಿಯಂ ಮಾರ್ಟಿಸ್‌, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ ಅಮೀನ್‌ ಪಡುಕೆರೆ, ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೊ, ಆರ್‌ ಜಿ ಪಿ ಆರ್‌ ಎಸ್‌ ರಾಜ್ಯ ಸಹ ಸಂಯೋಜಕಿ ರೋಶನಿ ಒಲಿವೇರಾ, ಡೆರಿಕ್‌ ಡಿಸೋಜಾ, ಲೆಸ್ಲಿ ಆರೋಝಾ, ಶಾಂತಿ ಪಿರೇರಾ, ಕೆಥೊಲಿಕ್‌ ಸಭಾ ಅಧ್ಯಕ್ಷರಾದ ಮೇರಿ ಡಿಸೋಜಾ ಹಾಗೂ ಇತರರು ಉಪಸ್ಥೀತರಿದ್ದರು.

Kshetra Samachara

Kshetra Samachara

2 months ago

Cinque Terre

9.29 K

Cinque Terre

0