ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ಮಧ್ಯಾಹ್ನ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಈ ಬಿಜೆಪಿ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರವಿಂದ ಲಿಂಬಾವಳಿ, ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಎಂಬ ವಿಶ್ವಾಸ ಬಂದಿದೆ. ಅಲ್ದೇ ಶಿಕ್ಷಕರ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ವ್ಯಕ್ತಿಗಳಿಗೆ ಗೆಲುವು ಸಿಗಲಿದೆ ಅಂದರು. ಇನ್ನು ಕರ್ನಾಟಕದಲ್ಲಿ ಬಿಜೆಪಿ ಬಲವಾದ ಶಕ್ತಿ ಹೊಂದಿರುವ ಪಕ್ಷವಾಗಿದೆ. ಸಂಘಟನಾತ್ಮಕ ಕಾರ್ಯಗಳ ಯಶಸ್ಸಿಗೆ ಕಾರ್ಯತಂತ್ರ ರೂಪಿಸಲಾಗಿದ್ದು ಪಂಚಾಯತ್ ಮಟ್ಟದ ಚುನಾವಣೆ ಬಗ್ಗೆ ಚರ್ಚೆ ನಡೆಯಿತು.
ಮುಂದಿನ ಪಂಚಾಯತ್ ಚುನಾವಣೆಯನ್ನು ಎದುರಿಸಲು ಬಿಜೆಪಿ ರೆಡಿಯಾಗಿದೆ ಎಂಫ಼ ಅವರು, ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸುವ ಬಗ್ಗೆ ತಂತ್ರ ರೂಪಿಸಲಾಗಿದೆ. ಅಲ್ಲದೇ ಈ ಸಭೆಯಲ್ಲಿ ಎರಡು ಮಹತ್ವದ ನಿರ್ಣಾಯಗಳನ್ನು ತೆಗೆದುಕೊಳ್ಳಲಾಗಿದ್ದು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲು ಪ್ರಸ್ತಾಪ ಆಗಿದೆ. ಇನ್ನು ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಪುನರ್ ವಿಮರ್ಶೆ ಮಾಡಿ ಕಾನೂನು ರೂಪಿಸಲಾಗುವುದು ಅಂದ್ರು. ಇನ್ನು ರಾಜ್ಯಸಭೆಗೆ ಹತ್ತಾರು ಹೆಸರುಗಳು ಬಂದಿದ್ದು ಪ್ರಮುಖರಾದವರನ್ನು ಆಯ್ಕೆ ಮಾಡುತ್ತೇವೆ ಅಂದರು.
Kshetra Samachara
05/11/2020 04:34 pm