ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಂಕದಕಟ್ಟೆಯಲ್ಲಿ ಕೊಪ್ಪರಿಗೆ ತುಂಬಿಸುವ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ, ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ

ಮಂಗಳೂರು: ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಂಗಳೂರು ಉತ್ತರ ವಲಯ ಮಾಜಿ‌ ಶಾಸಕ ಮೊಯ್ದಿನ್ ಬಾವಾ ಅವರಲ್ಲಿ ಕೊಪ್ಪರಿಗೆ ತುಂಬಿಸುವ ಕಾರ್ಯವನ್ನು‌ ಮಾಡಿಸಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗ್ತಿದೆ.

ಶಿವಸೇನಾ ಸಂಘಟಕರು ಎಂದು ಹೇಳಿಕೊಂಡಿರುವ ಬೆರ್ಮೊಟ್ಟು ಚಂದ್ರ ಕೃಷ್ಣ ಶೆಟ್ಟಿ ಎಂಬವರು ವಿಡಿಯೋ ಹರಿ ಬಿಟ್ಟಿದ್ದು, ಇದರಲ್ಲಿ ಸುಂಕದ ಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಥಮ‌ ದಿನ ನಡೆಯುವ ಕೊಪ್ಪರಿಗೆ ತುಂಬಿಸಿಕೊಳ್ಳುವ ಕಾರ್ಯವನ್ನು ಅನ್ಯ ಧರ್ಮಸ್ಥ ಮೊಯ್ದೀನ್ ಬಾವಾ ಎಂಬರಲ್ಲಿ ಮಾಡಿಸುವ ಮೂಲಕ‌ ದೇವಸ್ಥಾನ ಹಿಂದೂ ಧರ್ಮದ ಸಂಸ್ಕೃತಿ, ಆಚರಣೆ ಹಾಗೂ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ದೇವಸ್ಥಾನ ಆಡಳಿಯ ಸಮೀತಿಯ ವಿರುದ್ಧ ತುಳು ಭಾಷೆಯಲ್ಲಿ ಆರೋಪಗಳನ್ನು ಮಾಡಿದ್ದಾರೆ.

ಅಲ್ಲದೆ, ಬಪ್ಪನಾಡು ದೇವಸ್ಥಾನ ವನ್ನು ಉಲ್ಲೇಖಿಸಿ ಮಾತನಾಡಿರುವ ಇವರು, ಬಪ್ಪ ನಾಡು ದೇವಸ್ಥಾನದಲ್ಲಿ ಬಪ್ಪ ಬ್ಯಾರಿ ಡೋಲು ಬಡಿಯದೇ ಜಾತ್ರೆಯ ಕಾರ್ಯಗಳು ಆರಂಭ ಗೊಳ್ಳುತ್ತಿರಲಿಲ್ಲ ಎಂದು ನಮ್ಮ ಹಿರಿಯರು ತಿಳಿಸುತ್ತಿದ್ದರು.‌ ಅದರಂತೆ ಈಗಲೂ ಅದೇ ಆಚೆಣೆಗಳು ನಡೆಯುತ್ತಿವೆ ಎಂದಿದ್ದಾರೆ. ಅದೇ ರೀತಿ ಸುಂಕದಕಟ್ಟೆಯಲ್ಲೂ ಈ ಸಂಸ್ಕೃತಿಯನ್ನು ತಂದು ಮುಂದಿನ ತಲೆಮಾರಿಗೂ ಅದನ್ನೇ ಮುಂದುವರಿಸಲಾಗುವುದೋ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Edited By : Manjunath H D
Kshetra Samachara

Kshetra Samachara

24/10/2020 10:40 am

Cinque Terre

21.65 K

Cinque Terre

10

ಸಂಬಂಧಿತ ಸುದ್ದಿ