ಕೆಂಪಣ್ಣನ ಆರೋಪದ ಬಗ್ಗೆ ನಿನ್ನೆಯೇ ಸುದೀರ್ಘವಾಗಿ ಮಾಧ್ಯಮದೊಂದಿಗೆ ಮಾತನಾಡಿದ್ದೇನೆ. ಶೇ. 40 ಕಮಿಷನ್ ಬಗ್ಗೆ ಮಾತನಾಡುವ ಅವನು ಎಷ್ಟು ಪರ್ಸೆಂಟ್ ಕಾಂಗ್ರೆಸ್‌ನವರಿಂದ ಪಡೆದುಕೊಂಡಿದ್ದಾನೆಂದು ಬಹಿರಂಗ ಪಡಿಸಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಏಕವಚನದಲ್ಲೇ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ವಾಡಿಕೆಗಿಂತ ಒಂದೆರಡು ಪಟ್ಟು ಅಧಿಕ ಮಳೆ ಸುರಿದಿದೆ. ಮಂಗಳೂರು ಪ್ರದೇಶದಲ್ಲಿ ತುರ್ತಾಗಿ ರಿಪೇರಿ ಕಾರ್ಯಕ್ಕೆ 12 ಕೋಟಿ ರೂ. ಹಾಗೂ ಉಡುಪಿಗೆ 7.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಶೀಘ್ರದಲ್ಲೇ ಕಾಮಗಾರಿ ನಡೆಸಲು ಎಷ್ಟು ಅನುದಾನ ಬಿಡುಗಡೆ ಮಾಡಬೇಕು ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಶಾಶ್ವತ ಪರಿಹಾರಕ್ಕೆ ಮಳೆಗಾಲ ನಿಂತ ಬಳಿಕ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
Kshetra Samachara
27/08/2022 05:35 pm