ಮುಲ್ಕಿ: ಹಳೆಯಂಗಡಿ ವಲಯ ಎಸ್ಡಿಪಿಐ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ಸೆ.20ರಂದು ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಹಳೆಯಂಗಡಿ ಸಂತೆಕಟ್ಟೆ ಮಸೀದಿ ಬಳಿಯ ಕಟ್ಟಡದಲ್ಲಿ ಜರುಗಿತು.
ಸಂತೆಕಟ್ಟೆ ಮಸೀದಿ ಧರ್ಮಗುರು ದುವಾ ಮೂಲಕ ನೋಂದಾಯಿತ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸಿ, ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ಸಾಗ್ ಬ್ರಾಂಚ್ ಸದಸ್ಯರಾದ ಇಕ್ಬಾಲ್ ಮೋನು ಸಾಗ್, ಬದ್ರುದ್ದೀನ್ ಸಾಗ್, ಇಮ್ರಾನ್ ಸಾಗ್, ಎಸ್ಡಿಪಿಐ ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಉಪಾಧ್ಯಕ್ಷ ಇಕ್ಬಾಲ್ ಎಮ್.ಎ., ಎಸ್.ಡಿ.ಟಿ.ಯು. ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಕಾರ್ಯದರ್ಶಿ ಹಾರೀಸ್ ನವರಂಗ್, ಸಂತೆಕಟ್ಟೆ ಬ್ರಾಂಚ್ ಅಧ್ಯಕ್ಷ ನಝೀರ್ ಸಂತೆಕಟ್ಟೆ, ಪಿಎಫ್ ಐ ಹಳೆಯಂಗಡಿ ವಲಯ ಅಧ್ಯಕ್ಷ ಇಫ್ತಿಕಾರ್ ಸಾಗ್ ಉಪಸ್ಥಿತರಿದ್ದರು.
ಹಾರೀಸ್ ನವರಂಗ್ ಮಾತನಾಡಿ, ಸಾರ್ವಜನಿಕರಿಗೆ ಅವಶ್ಯಕವಾದ ಈ ಕಾರ್ಯಕ್ರಮ ಸಂಘಟಿಸಿದ ಎಸ್ಡಿಪಿಐ ಸದಸ್ಯರ ಕಾರ್ಯ ವೈಖರಿ ಶ್ಲಾಘಿಸಿದರು. ಮುಹ್ಸೀನ್ ಕದಿಕೆ, ಸ್ವಾಲಿ ಸಾಗ್, ಇಕ್ಬಾಲ್ ಸಾಗ್, ಸಿದ್ದೀಕ್ ಕದಿಕೆ, ಸೋಹಿಬ್ ಸಂತೆಕಟ್ಟೆ,ತೌಷೀಫ್, ಮುಸ್ತಾಕ್ ಕದಿಕೆ,ಶಾಮಿಲ್ ಸಾಗ್, ಆರೀಫ್ ಕದಿಕೆ, ಮುಹಮ್ಮದ್ ತೌಷೀಫ್, ಆಸೀಫ್ ಇಂದಿರಾನಗರ, ಮುಮ್ತಾಜ್ ಇಂದಿರಾನಗರ, ನೂರುದ್ದೀನ್ ಕದಿಕೆ,ನಿಹಾಲ್ ಕದಿಕೆ ಭಾಗವಹಿಸಿದ್ದರು.
ಸುಮಾರು 350 ಕ್ಕಿಂತಲು ಅಧಿಕ ನಾಗರಿಕರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಮಾಡಿಸಿ, ವಿತರಿಸಲಾಯಿತು. ಅಶೋಕ್ ಹಾಗೂ ಸಿಬ್ಬಂದಿ ಡಿಜಿಟಲ್ ಸೇವಾ ಕೇಂದ್ರ ಹಳೆಯಂಗಡಿ ಸಹಕರಿಸಿದರು.
Kshetra Samachara
20/09/2020 11:03 pm