ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿ ಕೂಡ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದೆ; ಮಾಜಿ ಸಚಿವ ಅಭಯಚಂದ್ರ ಜೈನ್

ಕಾಂಗ್ರೆಸ್ ಪಕ್ಷ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದೆ ಎಂದು ಗೂಬೆ ಕೂರಿಸುವ ಬಿಜೆಪಿ ಕೂಡ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಪ್ರಶ್ನೆಗೆ ಉತ್ತರಿಸಿದರು.ಇವತ್ತಿನ ಸಿಎಂ ಯಾರು? ಅವರೂ ಕೂಡ ಮಾಜಿ ಸಿಎಂಪುತ್ರನೇ.ಬಿಜೆಪಿಯವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.ನಾನು ಅದನ್ನು ಮಾಡಲಾರೆ.ನನ್ನ ಮಗನ ಗೆಳೆಯ ಮಿಥುನ್ ರೈ ಯೂಥ್ ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕ.ಮೂಡುಬಿದ್ರೆ ಕ್ಷೇತ್ರದ ಟಿಕೆಟ್ ನ್ನು ಮಿಥುನ್ ರೈಗೆ ಕೊಡಿ ಎಂದು ಈ ಹಿಂದೆಯೇ ಹೇಳಿದ್ದೇನೆ ಎಂದು ಹೇಳಿದರು.

Edited By :
Kshetra Samachara

Kshetra Samachara

23/07/2022 04:19 pm

Cinque Terre

9.31 K

Cinque Terre

0

ಸಂಬಂಧಿತ ಸುದ್ದಿ