ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಇಡಿ ತನಿಖೆ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಹೊಯ್ ಕೈ ನಡೆದಿದೆ.
ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆ ಬಳಿಕ ಜಿಲ್ಲಾಧಿಕಾರಿ ಕಛೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಜಾಥಾ ತೆರಳಲು ನಿರ್ಧಾರ ಮಾಡಿದ್ದು ಈ ವೇಳೆ ಪೊಲೀಸರು ಜಾಥಾ ಗೆ ಅನುಮತಿ ನಿರಾಕರಣೆ ಮಾಡಿದ್ದಾರೆ.
ಪೊಲೀಸರು ಪ್ರವೇಶ ನಿರಾಕರಣೆ ಹಿನ್ನಲೆಯಲ್ಲಿ ರೊಚ್ಚಿಗೆದ್ದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ನೇತೃತ್ವದ ಕಾರ್ಯಕರ್ತರ ತಂಡ ಕ್ಲಾಕ್ ಟವರ್ ಬಳಿ ಕಾಂಗ್ರೆಸ್ ರೋಷಾವೇಶ ಮೆರೆದಿದೆ.
ಬ್ಯಾರಿಕೇಡ್ ಕಿತ್ತೆಸೆದು ಪೊಲೀಸರ ಜೊತೆ ಹೊಯ್-ಕೈ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಮೊಯ್ದೀನ್ ಭಾವ, ಮಧು ಬಂಗಾರಪ್ಪ,ಐವಾನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
PublicNext
22/07/2022 01:57 pm