ಹಿಂದಿನ ಸರಕಾರಗಳು ರಾಜಕೀಯವಾಗಿ ಬೆಂಬಲ ಇದ್ದವರನ್ನೇ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುತ್ತಿದ್ದರು,ಆದರೆ ಪ್ರಧಾನಿ ನರೇಂದ್ರ ಮೋದಿಯವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಮತ್ತು ಕುಂಪಲ ಬಾಲಕೃಷ್ಣ ಮಂದಿರದ ವತಿಯಿಂದ ಧರ್ಮಸ್ಥಳದಲ್ಲಿ ಗೌರವ ಅಭಿನಂದನೆಗಳನ್ನು ಅರ್ಪಿಸಲಾಯಿತು.
ಸತೀಶ್ ಕುಂಪಲ ಅವರು ಈ ವೇಳೆ ಮಾತನಾಡಿ ಮೋದಿಜಿಯವರು ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿದ್ದು ರಾಜ್ಯ,ರಾಷ್ಟ್ರದ ಆಸ್ತಿಕರು,ಆಧ್ಯಾತ್ಮಿಕ ಚಿಂತಕರಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ.ಹೆಗ್ಗಡೆಯವರು ವಿಶೇಷವಾಗಿ ಸಮಾಜದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಅನೇಕ ಧಾರ್ಮಿಕ ಕೇಂದ್ರ,ರುದ್ರಭೂಮಿ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ ಅನುದಾನ ನೀಡಿದ್ದು ಅವರಿಗೆ ರಾಜ್ಯಸಭಾ ಸದಸ್ಯತನ ಅರಸಿ ಬಂದದ್ದು ನಮಗೆಲ್ಲರಿಗೂ ಅತೀವ ಸಂತಸ ನೀಡಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ,ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪುರುಷೋತ್ತಮ ಕಲ್ಲಾಪು,ಪ್ರವೀಣ್.ಎಸ್ ಕುಂಪಲ,ಗಣೇಶ್ ಪಂಡಿತ್ ಮುಳಿಹಿತ್ಲು ಮೊದಲಾದವರು ಉಪಸ್ಥಿತರಿದ್ದರು.
PublicNext
18/07/2022 05:08 pm