ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಸಿಡಿದೆದ್ದ ಅನ್ವರ್ ಮಾಣಿಪ್ಪಾಡಿ

ವಕ್ಫ್ ಆಸ್ತಿ ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕದಿರುವುದು ಹಾಗೂ ಬಿಜೆಪಿಯ ಮುಸ್ಲಿಂ ಸಮುದಾಯ ವಿರೋಧಿ ಧೋರಣೆಯ ಬಗ್ಗೆ ಸಿಡಿದೆದ್ದ ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಅವರು ರಾಜ್ಯ ಬಿಜೆಪಿ ವಿರುದ್ಧ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗವಾಗಿ ಹರಿಹಾಯ್ದಿದ್ದಾರೆ.

ನಗರದ ಹೋಟೆಲೊಂದರಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಿಜೆಪಿ ತೊರೆಯದೆ, ಪಕ್ಷದೊಳಗೆ ಇದ್ದುಕೊಂಡೇ ಈ ವಿಚಾರಗಳ ವಿರುದ್ಧ ದನಿಯೆತ್ತಲಿದ್ದೇನೆ. ಅಲ್ಲದೆ ಬಿಜೆಪಿ ಸರ್ಕಾರ ನನಗೆ ನೀಡಿರುವ ಗನ್ ಮ್ಯಾನ್ ಹಾಗೂ ಸರ್ಕಾರದ ಇತರ ಸವಲತ್ತುಗಳನ್ನು ಹಿಂದಿರುಗಿಸಲಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಆಸ್ತಿಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ 10 ವರ್ಷಗಳ ಕಾಲ ಅಧ್ಯಯನ ನಡೆಸಿ ನಾನು ವರದಿ ಸಲ್ಲಿಸಿದ್ದೆ. ಆದರೆ ಇದಕ್ಕೆ ಬಿಜೆಪಿಗಿಂತ ಹಿಂದಿದ್ದ ಸರಕಾರದಿಂದ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಆದರೆ ಬಿಜೆಪಿ ಸರಕಾರ ಅಧಿಕಾರ ಹಿಡಿದ ಬಳಿಕ ತನಗೆ ಪ್ರೋತ್ಸಾಹ ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಬಿಜೆಪಿ ಸರಕಾರದಿಂದ ತನ್ನ ಈ ಪ್ರಯತ್ನವನ್ನು ಹತ್ತಿಕ್ಕುವ ಯತ್ನ ನಡೆಯಿತು. ಅಲ್ಲದೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ರಿಂದ ವಕ್ಫ್ ಆಸ್ತಿ ವಿಚಾರದಿಂದ ಹೊರ ಬರುವಂತೆ ಕೋಟ್ಯಂತರ ರೂ. ಆಮಿಷ ಬಂದಿತ್ತು. ಆದರೆ ನಾನು ಯಾವುದೇ ಆಮಿಷಗಳಿಗೆ ಬಲಿಯಾಗದೆ ನನ್ನ ಸೈದ್ಧಾಂತಿಕ ವಿಚಾರಗಳ ಬಗ್ಗೆ ಅಚಲನಾಗಿದ್ದೇನೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಉತ್ತಮವಾದ ಪರಿಕಲ್ಪನೆಯಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲಗೊಂಡಿದೆ. ಹಿಂದೂ ದೇವಾಲಯಗಳ ಜಾತ್ರೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರಾಕರಣೆ, ಹಿಜಾಬ್ ವಿವಾದ, ಮಳಲಿ ಮಸೀದಿ, ಹಲಾಲ್ ವಿಚಾರದಲ್ಲಿ ಬಿಜೆಪಿ ಸರಕಾರ ಮುಸ್ಲಿಂ ಸಮುದಾಯದ ವಿರೋಧಿ ಧೋರಣೆಯನ್ನು ತಳೆದಿದೆ. ಈ ಮೂಲಕ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಯತ್ನ ಮಾಡುತ್ತಿದೆ. ಈ ಎಲ್ಲಾ ಕಾರಣದಿಂದ ನಾನು ಈ ನಿರ್ಧಾರವನ್ನು ತಳೆದಿದ್ದೇನೆ ಎಂದು ಅನ್ವರ್ ಮಾಣಿಪ್ಪಾಡಿಯರು ಹೇಳಿದರು.

Edited By :
PublicNext

PublicNext

27/06/2022 04:17 pm

Cinque Terre

41.53 K

Cinque Terre

0

ಸಂಬಂಧಿತ ಸುದ್ದಿ