ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯುತ್ತಿದೆ.
ಆದರೆ, ಈ ಸಭೆಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ, SKSSF, SSF, PFI, ಮುಸ್ಲಿಂ ಐಕ್ಯಾತಾ ವೇದಿಕೆ, ಜಮಾತ್ ಇಸ್ಲಾಂ ಹಿಂದ್ ಸಂಘಟನೆ ಭಾಗವಹಿಸದಿರಲು ನಿರ್ಧಾರ ಮಾಡಿದೆ. ಎಲ್ಲಾ ಧಾರ್ಮಿಕ ಮುಖಂಡರನ್ನು ಸಭೆಗೆ ಜಿಲ್ಲಾಧಿಕಾರಿ ಆಹ್ವಾನಿಸಿದ್ದಾರೆ.
ಇನ್ನು, ಈ ಸಭೆಗೆ ಮಾಧ್ಯಮಗಳನ್ನು ಹೊರಗೆ ಇಟ್ಟು ಜಿಲ್ಲಾಡಳಿತ ಸಭೆ ನಡೆಸ್ತಿದೆ. ಅತ್ತ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್ ಮನೆಯಲ್ಲಿ ಮುಸ್ಲಿಂ ಮುಖಂಡರು ಸಭೆ ಸೇರಿದ್ದಾರೆ.
Kshetra Samachara
30/07/2022 01:47 pm