ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು, ಹಿಂಸೆಯಿಂದಲ್ಲ"

ಗಲಾಟೆಯಿಂದ ಖಂಡಿತಾ ಲಾಭವಿಲ್ಲ. ಆದರೆ, ಯಾರಿಗೆ ಲಾಭ ಇದೆ ಎನ್ನುವುದನ್ನು ನೀವೇ ತಿಳಿದುಕೊಳ್ಳಿ. ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಹೊರತು ಹಿಂಸೆಯಿಂದಲ್ಲ. ಘರ್ಷಣೆ, ಗಲಾಟೆ ಆಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರವಾಗಿ ಮಾತನಾಡಿ, ಎಡಿಜಿಪಿ ಅಲೋಕ್ ಕುಮಾರ್ ಆರೋಪಿಗಳ ಆಸ್ತಿ ಮುಟ್ಟುಗೋಲು ಬಗ್ಗೆ ಹೇಳಿದ್ರು. ಆದರೆ, ನಾನು ಅವರಿಗೆ ಸಲಹೆ ಕೊಡುವುದು ಏನಂದ್ರೆ... ನಿಮಗೆ ಸಾಧ್ಯ ಇದ್ರೆ, ಈ ಹತ್ಯೆಗಳ ಸೂತ್ರಧಾರ ಯಾರೆಂದು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಿ ಎಂದರು.

ಇನ್ನು, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿ ಕುರಿತು ಮಾತನಾಡಿದ ರಮಾನಾಥ ರೈ, ಪ್ರಕೃತಿ ವಿಕೋಪ ಆದ ಸ್ಥಳವನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ ಅವರ ಕಾರಿಗೆ ಮೊಟ್ಟೆ ಬಿಸಾಡಿದ್ದಾರೆ. ಕಾರಣ ಯಾವುದೇ ಇರಬಹುದು. ಆದರೆ, ಅವರು ಒಬ್ಬ ವಿಪಕ್ಷ ನಾಯಕ ಹಾಗೂ ಸಮಾಜದಲ್ಲಿ ಸ್ಥಾನಮಾನ ಇರುವವರು. ಆದ್ದರಿಂದ ಈ ಕುಕೃತ್ಯ ಸಲ್ಲದು. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.

Edited By :
Kshetra Samachara

Kshetra Samachara

19/08/2022 07:54 pm

Cinque Terre

13.02 K

Cinque Terre

2

ಸಂಬಂಧಿತ ಸುದ್ದಿ