ಕಾಂಗ್ರೆಸ್ ನಾಯಕರ ಮನೆ- ಮನೆಯಲ್ಲೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಹೇಳಿದ್ದಾರೆ. ಇವತ್ತು ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಲಾಗಿರುವ ಸಾವರ್ಕರ್ ಫ್ಲೆಕ್ಸ್ ಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಪಿಎಫ್ಐ ದೇಶದ ಅನಾಗರಿಕ ಸಂಘಟನೆ. ಯಾರು ದೇಶಪ್ರೇಮಿಗಳು ಎಂದು ಪಿಎಫ್ ಐ ಮತ್ತು ಎಸ್ ಡಿಪಿಐಗೆ ಗೊತ್ತಿಲ್ಲ ಎಂದ ಅವರು, ಕಾಂಗ್ರೆಸ್ ಡೋಂಗಿ ದೇಶಭಕ್ತರನ್ನು ಇಟ್ಟುಕೊಂಡಿದೆ. ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ ಎಂದರು.
ಅಂದು ಜಿನ್ನಾ ದೇಶ ವಿಭಜನೆ ಮಾಡಿದರು. ಸಿದ್ದರಾಮಯ್ಯ ಜಿನ್ನಾರ ಮತ್ತೊಂದು ರೂಪ. ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದು, ಅರಳು-ಮರಳು ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮನೆ ಅಂಗಳದಲ್ಲೂ ಬೇಕಾದ್ರೆ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ. ವೀರ ಸಾವರ್ಕರ್ ದೇಶಭಕ್ತಿ ಏನು ಎಂಬುದನ್ನು ಕಾಂಗ್ರೆಸ್ ಗೆ ತೋರಿಸಿ ಕೊಡುತ್ತೇವೆ ಎಂದು ಗುಡುಗಿದರು.
ವೀರ ಸಾವರ್ಕರ್ ಅವರ ಹೋರಾಟ, ಸಾಧನೆ ಏನು ಎಂಬುದನ್ನು ತಿಳಿದುಕೊಳ್ಳಿ. ಸಾವರ್ಕರ್ ಗೆ ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ಬ್ರಿಟಿಷರು ಕೊಟ್ಟು, ಜೈಲಿನಲ್ಲಿ ಚಿತ್ರಹಿಂಸೆ ನೀಡಿದ್ದರು ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ.
PublicNext
17/08/2022 12:49 pm