ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳು ಬ್ಯಾನ್ ಆಗಲಿ; ಮಿಥುನ್ ರೈ

ಕಳೆದೆರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳು ಬ್ಯಾನ್ ಆಗಲಿ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದರು.

ದ.ಕ‌.ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ, ಎಜಿಡಿಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿಸಭೆಯ ಬಳಿಕ ಮಾತನಾಡಿ, ಧಾರ್ಮಿಕ ಮುಖಂಡರನ್ನು ಕರೆದು ತಮ್ಮ ಧರ್ಮದವರನ್ನು ಕರೆದು ಸಂದೇಶ ಕೊಡುಬೇಕು. ಮುಂಬರುವ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನು ಶಾಂತಿಸಭೆಯಲ್ಲಿ ನೀಡಿದ್ದೇವೆ ಎಂದು ಹೇಳಿದರು.

ದ.ಕ.ಜಿಲ್ಲೆ ಅಭಿವೃದ್ಧಿ, ಉದ್ಯೋಗವಂತರ, ಸೌಹಾರ್ದತೆಯ ಜಿಲ್ಲೆಯಾಗಬೇಕು. ಮುಂಬರುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸ್ಪಷ್ಟವಾದ ಮಾಹಿತಿ ನೀಡಿದ್ದೇವೆ‌ ಎಂದು ಮಿಥುನ್ ರೈ ಹೇಳಿದರು.

Edited By :
Kshetra Samachara

Kshetra Samachara

30/07/2022 07:38 pm

Cinque Terre

21.04 K

Cinque Terre

6

ಸಂಬಂಧಿತ ಸುದ್ದಿ